Advertisement

ವದಂತಿ ನಂಬಬೇಡಿ ಲಸಿಕೆ ಹಾಕಿಸಿ’

01:10 AM Jan 05, 2019 | |

ಬೆಂಗಳೂರು: ಪೋಲಿಯೊ ಲಸಿಕೆ ಕುರಿತಂತೆ ವ್ಯಾಟ್ಸಪ್‌ನಲ್ಲಿ ವದಂತಿಯೊಂದು ಹರಿದಾಡುತ್ತಿದ್ದು, ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಸ್ಪಷ್ಟನೆ ನೀಡಿದ್ದಾರೆ.

Advertisement

ಇತ್ತೀಚೆಗೆ ವ್ಯಾಟ್ಸಪ್‌ನಲ್ಲಿ ಆಡಿಯೋ ಮೆಸೇಜ್‌ ಒಂದು ಹರಿದಾಡುತ್ತಿದ್ದು, ಅದರಲ್ಲಿ “ನಮಸ್ಕಾರ ಸ್ನೇಹಿತರೆ, ನಿಮ್ಮ ಮಕ್ಕಳಿಗೆ ಪೋಲಿಯೊ ಲಸಿಕೆಯನ್ನು ಹಾಕಿಸಬಾರದು ಎಂದು ಕೇಳಿಕೊಳ್ಳುತ್ತೇನೆ. ಪೋಲಿಯೊ ತಯಾರಕ ಕಂಪನಿಯ ಮಾಲೀಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ ಈ ಬಾರಿಯ ಪೋಲಿಯೊ ಲಸಿಕೆಯ ಜೊತೆ ವೈರಲ್‌ ಪೀವರ್‌ ಡ್ರಾಫ್ ಬರುತ್ತಿದೆ. ಎಲ್ಲರಿಗೂ ಈ ಸಂದೇಶ ತಿಳಿಸಿ ಮಕ್ಕಳನ್ನು ಉಳಿಸಿ’ ಎಂದು ಸುಳ್ಳು ಮಾಹಿತಿ ನೀಡಲಾಗಿದೆ.

ಈ ವದಂತಿಗೆ ಸ್ಪಷ್ಟೀಕರಣ ನೀಡಿರುವ ಲಸಿಕೆ ವಿಭಾದದ ಉಪನಿರ್ದೇಶಕರು, ಈ ವೈರಲ್‌ ಆಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ಪೋಲಿಯೊ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮವಾಗಿದ್ದು, 1995ರಿಂದ ನಡೆದುಕೊಂಡು ಬರುತ್ತಿದೆ. ಪೋಲಿಯೋ ಲಸಿಕೆ ಸಂಪೂರ್ಣ ಸುರಕ್ಷತೆವಾಗಿದ್ದು, ಈ ಕುರಿತು ಯಾವುದೇ ಆತಂಕ ಬೇಡ. ಇನ್ನು ಇಂತಹ ಅಪಪ್ರಚಾರ ಹಾಗೂ ವದಂತಿಯಿಂದ ಪೋಲಿಯೊ ಕಾರ್ಯಕ್ರಮ ಅನುಷ್ಠಾನಕ್ಕೆ ಹಿನ್ನೆಡೆ ಉಂಟಾಗುತ್ತದೆ. ಫೆ.3ರಂದು ನಡೆಯುವ ಪೋಲಿಯೋ ಲಸಿಕೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಿ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next