Advertisement

ಮಾರಕ ರೋಗಗಳ ತಡೆಗಟ್ಟಲು ಸಮುದಾಯದ ಸಹಕಾರ ಅವಶ್ಯ –ಶಾಸಕ ಸಿದ್ದು ಸವದಿ

01:22 PM Feb 27, 2022 | Team Udayavani |

ರಬಕವಿ-ಬನಹಟ್ಟಿ: ಮಾರಕ ರೋಗಗಳ ತಡೆಗಟ್ಟಲು ಸಮುದಾಯದ ಸಹಕಾರ ಅವಶ್ಯವಾಗಿದೆ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ ತಿಳಿಸಿದರು.

Advertisement

ಅವರು ಭಾನುವಾರ ಸ್ಥಳೀಯ ಶಂಕರಲಿಂಗ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಳ‍್ಳಲಾ ಪೋಲಿಯೊ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪೋಲಿಯೊ ಲಸಿಕೆಯಿಂದ ಯಾವುದೆ ದುಷ್ಪರಿಣಾಮಗಳು ಇಲ್ಲ. ಆದ್ದರಿಂದ ಪೋಲಿಯೊ ಲಸಿಕೆಯನ್ನು ಪಡೆದುಕೊಳ‍್ಳುವ ಸಂದರ್ಭದಲ್ಲಿ ಯಾವುದೆ ಮೂಢ ನಂಬಿಕೆಗಳು ಬೇಡ. ಸುಭದ್ರ ಮತ್ತು ಆರೋಗ್ಯ ಭಾರತಕ್ಕಾಗಿ ಐದು ವರ್ಷ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೊ ಲಸಿಕೆಯನ್ನು ಹಾಕಿಸಬೇಕು ಎಂದು ಸವದಿ ಹೇಳಿದರು.

ಇದೇ ಸಂದರ್ಭದಲ್ಲಿ ಜಮಖಂಡಿ ಹಿರಿಯ ಆರೋಗ್ಯ ನಿರೀಕ್ಷಕ ಉಮೇಶ ಜೋಶಿ ಮಾತನಾಡಿ, ರಬಕವಿ ಬನಹಟ್ಟಿ ತಾಲ್ಲೂಕಿನಲ್ಲಿ 40114 ಮಕ್ಕಳಿಗೆ ಪೋಲಿಯೊ ನೀಡುವ ಗುರಿಯನ್ನು ಹೊಂದಲಾಗಿದೆ. ಅದಕ್ಕಾಗಿ 161 ಬೂತ್‍, 11 ಸಂಚಾರಿ ತಂಡಗಳನ್ನು ಹಾಗೂ ನಾಲ್ಕು ಕೇಂದ್ರಗಳನ್ನು ಬಸ್ ನಿಲ್ದಾಣಗಳನ್ನು ತೆರೆಯಲಾಗಿದೆ. 352 ಆರೋಗ್ಯ ಕಾರ್ಯಕರ್ತರು ಲಸಿಕಾ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸಲಿದ್ಧಾರೆ. ಉಳಿದ ಮಕ್ಕಳಿಗೆ ಸಿಬ್ಬಂದಿ ವರ್ಗದವರು ಮನೆ ಮನೆಗೆ ತೆರಳಿ ಸೋಮವಾರದಿಂದ ಬುಧವಾರದವರೆಗೆ ಪೋಲಿಯೊ ಲಸಿಕೆಯನ್ನು ನೀಡುತ್ತಾರೆ. ಯಾವುದೆ ಮಕ್ಕಳು ಲಸಿಕೆಯಿಂದ ದೂರ ಉಳಿಯದಂತೆ ಅಧಿಕಾರಿಗಳು ಗಮನ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಎಸ್‍.ಬಿ.ಇಂಗಳೆ, ನಗರಸಭೆಯ ಅಧ್ಯಕ್ಷ ಶ್ರೀಶೈಲ ಬೀಳಗಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಸಪ್ರಭು ಹಟ್ಟಿ, ಡಾ. ಎನ್‍.ಎಂ.ನದಾಫ್, ಡಾ.ವೀರೇಶ ಹುಡೇದಮನಿ, ಡಾ.ಕಾವೇರಿ ಹಳ್ಯಾಳ, ಪೌರಾಯುಕ್ತ ಶ್ರೀನಿವಾಸ ಜಾಧವ, ಕಚೇರಿ ಅಧೀಕ್ಷಕಿ ಸ್ಮೀತಾ ಕಾಳಗಿ, ಧರೆಪ್ಪ ಉಳ್ಳಾಗಡ್ಡಿ, ಅಪ್ಪಾಜಿ ಹೂಗಾರ, ಎಂ.ಕೆ.ಮುಲ್ಲಾ, ರವಿ ಅರವಡಿ, ನಂದಾ ಕೊಕಟನೂರ, ಬಿ.ಎಸ್‍.ಪಟ್ಟಣಶೆಟ್ಟಿ, ಸಂಜಯ ತೆಗ್ಗಿ, ಯಲ್ಲಪ್ಪ ಕಟಗಿ, ಬಿ. ಎಂ. ಡಾಂಗೆ, ಎಮ್. ಎಮ್. ಮುಘಳಖೋಡ, ಶೋಭಾ ಹೊಸಮನಿ, ರಾಜಕುಮಾರ ಹೊಸೂರ ಸೇರಿದಂತೆ ಅನೇಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next