ಉಡುಪಿ: ಬೆಳ್ಳಂಬೆಳ್ಳಗೆ ನಗರದಲ್ಲಿ ಗ್ರಾಹಕರಿಗೆ ಮದ್ಯ ವಿತರಿಸುತ್ತಿದ್ದ ಎರಡು ಬಾರ್ ಗಳ ಮೇಲೆ ದಾಳಿ ನಡೆಸಿದ ಉಡುಪಿ ವೃತ್ತ ನಿರೀಕ್ಷಕರ ನೇತೃತ್ವದ ತಂಡ ಮೂವರನ್ನು ಬಂಧಿಸಿದ್ದಾರೆ.
ನಗರದ ಹಳೆಯ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇರುವ ಕೃಷ್ಣಕೃಪಾ ಕಾಂಪ್ಲೆಕ್ಸ್ ನಲ್ಲಿರುವ ಆಶಾ ಬಾರ್ ಆ್ಯಂಡ್ ರೆಸ್ಟೋರೆಂಟ್ ಮತ್ತು ಉಜ್ವಲ್ ಬಾರ್ ಮುಂಜಾನೆ ಮುಂಜಾನೆ ಗಂಟೆ ಸುಮಾರಿಗೆ ತೆರೆದು ಗ್ರಾಹಕರಿಗೆ ಮದ್ಯ ವಿತರಿಸುತ್ತಿದ್ದರು.
ಇದನ್ನೂ ಓದಿ:ಪಾಕ್ ಗಡಿಯಲ್ಲಿ ಭೂಗತ ಸುರಂಗಗಳನ್ನು ಪರೀಕ್ಷಿಸಲು ಡ್ರೋನ್-ಮೌಂಟೆಡ್ ರಾಡಾರ್
ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ, ಅಬಕಾರಿ ಇಲಾಖೆಗೆ ದೂರು ನೀಡಿದರೂ ಕಾನೂನು ಉಲ್ಲಂಘಿಸಿ ವ್ಯವಹಾರ ನಡೆಸುತ್ತಿರುವುದರಿಂದ ಸ್ಥಳೀಯರು ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು.