ನವ ದೆಹಲಿ : ವಿಮೆಯ ದಾಖಲೆಗಳನ್ನು ಸುರಕ್ಷಿತವಾಗಿ ಇಡುವುದು ತುಂಬಾ ಮುಖ್ಯ. ವಿಮೆಗೆ ಪಾಲುದಾರರಾಗುವುದಷ್ಟೇ ಅಲ್ಲ. ಅದರ ದಾಖಲೆಗಳನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಕೂಡ ಬಹುಳ ಪ್ರಮುಖವಾಗುತ್ತದೆ. ದಾಖಲೆ ಪತ್ರಗಳು ಕಳೆದು ಹೋದರೆ ವಿಮೆಯ ಲಾಭ ನಮಗೆ ದೊರಕುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇನ್ಮುಂದೆ ನಮ್ಮ ವಿಮೆಯ ದಾಖಲೆ ಪತ್ರಗಳನ್ನು ಸುರಕ್ಷಿತವಾಗಿಡುವುದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಡಿಜಿಲಾಕರ್ ನಲ್ಲಿ ನಿಮ್ಮ ವಿಮೆಯ ಪಾಲಿಸಿಗಳನ್ನು ಸುರಕ್ಷಿತವಾಗಿ ಇಡಬಹುದಾಗಿದೆ.
ಓದಿ : ವಿದೇಶಿ ಬಂಡವಾಳದ ಒಳಹರಿವು; ಮುಂಬಯಿ ಷೇರುಪೇಟೆ ಸೂಚ್ಯಂಕ 141 ಅಂಕ ಏರಿಕೆ, ನಿಫ್ಟಿ 15,000
ಏನಿದು ಡಿಜಿಲಾಕರ್ (DigiLocker) ?
ಡಿಜಿಲಾಕರ್ ಸರ್ಕಾರ ರೂಪಿಸಿರುವ ಸುರಕ್ಷಿತ ಮೊಬೈಲ್ ಅಪ್ಲಿಕೇಶನ್. ಈ ಅಪ್ಲಿಕೇಶನ್ ದಾಖಲೆ ಪತ್ರಗಳನ್ನು ಇಡಲು ತುಂಬಾ ಸೇಫ್ ಎಂದು ಹೇಳಲಾಗುತ್ತಿದೆ. ಇದರಲ್ಲಿ ಇಡಲಾದ ದಾಖಲೆಪತ್ರಗಳನ್ನು ಕದಿಯಲು ಅಥವಾ ಕದ್ದು ಓದಲು ಸಾಧ್ಯವಿಲ್ಲ. ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಸುರಕ್ಷಿತ ಮೊಬೈಲ್ ಅಪ್ಲಿಕೇಶನ್ ನನ್ನು ಅಭಿವೃದ್ಧಿ ಪಡಿಸಿದೆ.
ಎಲೆಕ್ಟ್ರಾನಿಕ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯ ಅಭಿವೃದ್ಧಿ ಪಡಿಸಿದ ಈ ಸುರಕ್ಷಿತ ಅಪ್ಲಿಕೇಶನ್ ನನ್ನು ಬಳಸುವುದರಿಂದ ವಿಮಾ ವಲಯದಲ್ಲಿ ಸಾಕಷ್ಟು ಖರ್ಚುಗಳು ಉಳಿತಾಯವಾಗುತ್ತದೆ. ವಿಮಾ ಸೇವೆಗಳ ರೆಸ್ಪಾನ್ಸ್ ಅವಧಿಗಳು ಕೂಡ ಕಡಿಮೆಯಾಗುತ್ತದೆ. ವಿಮಾ ಸೇವೆಗಳ ಪ್ರಕ್ರಿಯೆಗಳು ಹಾಗೂ ಕ್ಲೈಮ್ ಸೆಟಲ್ಮೆಂಟ್ ಕೂಡ ಸುಲಭವಾಗಲಿದೆ. ಈ ಸಂಬಂಧ ಮಾಹಿತಿ ತಂತ್ರಜ್ಞಾನದ ಅಡಿಯಲ್ಲಿ ಬರುವ ಇ– ಗವರ್ನೆನ್ಸ್ ಡಿವಿಜನ್ ವಿಮಾ ಕಂಪೆನಿಗಳಿಗೆ ಅಗತ್ಯವಿರುವ ಲಾಜಿಸ್ಟಿಕ್ ನೆರವು ನೀಡಬೇಕು ಎಂದು ಎಂದು ಐ ಆರ್ ಡಿ ಎ ಐ(Insurance Regulatory and Development Authority) ಹೇಳಿದೆ.
ಓದಿ : ಪೆಟ್ರೋಲ್, ಡಿಸೇಲ್ ಬೆಲೆ ಮತ್ತೆ ಏರಿಕೆ : ಮಹಾನಗರಗಳಲ್ಲಿ ಇಂದಿನ ಬೆಲೆ ಎಷ್ಟು..?