Advertisement

ಸಾಗರ:ಪೊಲೀಸರನ್ನು ಕಂಡು ದಿಕ್ಕಾಪಾಲಾಗಿ ಓಡುತ್ತಿರುವ ವಿದ್ಯಾರ್ಥಿಗಳು!

05:40 PM Nov 18, 2021 | Team Udayavani |

ಸಾಗರ: ನಗರದ ನೆಹರೂ ಮೈದಾನ, ಗೋಪಾಲಗೌಡ ಕ್ರೀಡಾಂಗಣ ಇನ್ನಿತರ ಕಡೆಗಳಲ್ಲಿ ಕಂಡು ಬಂದ ಕಾಲೇಜು ವಿದ್ಯಾರ್ಥಿಗಳನ್ನು 112 ವಾಹನದ ಪೊಲೀಸ್ ಸಿಬ್ಬಂದಿ ಬೆದರಿಸಿ, ಎಚ್ಚರಿಕೆ ನೀಡಿದ್ದಾರೆ.

Advertisement

ವಿದ್ಯಾರ್ಥಿಗಳು ತರಗತಿಗಳಿಗೆ ಚಕ್ಕರ್ ಹಾಕಿ ಕಾಲಹರಣ, ವಿಡಿಯೋಗೇಮ್, ಧೂಮಪಾನ ಇನ್ನಿತರೆ ಚಟುವಟಿಕೆ ಕಾರ‍್ಯ ನಡೆಸುತ್ತಿದ್ದ ಸ್ಥಳಗಳಿಗೆ ಬುಧವಾರ ಪೊಲೀಸರು ಏಕಾಏಕಿ ಭೇಟಿ ನೀಡಿದ ಸಂದರ್ಭ ಹುಡುಗರು ತಪ್ಪಿಸಿಕೊಂಡು ಹೋಗಲು ಓಡಿದ್ದಾರೆ. ಒಬ್ಬಿಬ್ಬರಿಗೆ ಲಾಠಿ ರುಚಿಯನ್ನು ಸಹ ಪೊಲೀಸರು ತೋರಿಸಿದ್ದಾರೆ.

ನೆಹರೂ ಮೈದಾನ ಹಾಗೂ ಗೋಪಾಲಗೌಡ ಕ್ರೀಡಾಂಗಣದ ಬಳಿ ಪೊಲೀಸರನ್ನು ಕಂಡ ವಿದ್ಯಾರ್ಥಿ ಸಮೂಹ ಓಟ ಆರಂಭಿಸಿದೆ. ಅದರಲ್ಲಿಯೂ ಗೋಪಾಲಗೌಡ ಕ್ರೀಡಾಂಗಣದಲ್ಲಿ ದೊಡ್ಡ ಸಂಖ್ಯೆಯ ವಿದ್ಯಾರ್ಥಿ ಗುಂಪು ಕಂಡುಬಂದಿದೆ. ತರಗತಿಗೆ ಚಕ್ಕರ್ ಹಾಕಿದ್ದ ವಿದ್ಯಾರ್ಥಿಗಳಿಗೆ ೧೧೨ ವಾಹನದ ಲೋಕೇಶ್ ಮತ್ತಿತರ ಸಿಬ್ಬಂದಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸಾರ್ವಜನಿಕರ ಆಗ್ರಹ
ನೆಹರೂ ಮೈದಾನ ಹಾಗೂ ಗೋಪಾಲಗೌಡ ಕ್ರೀಡಾಂಗಣದಲ್ಲಿನ ವಿದ್ಯಾರ್ಥಿಗಳನ್ನು ಬುಧವಾರ ಪೊಲೀಸರು ಚದುರಿಸಿದ ವೀಡಿಯೋ ವೈರಲ್ ಆದ ಬೆನ್ನಲ್ಲೇ ನಗರದ ಹೊರವಲಯದಲ್ಲಿನ ಹಲವು ಭಾಗಗಳಲ್ಲಿನ ಅಡಗುದಾಣ, ಅನೈತಿಕ ಚಟುವಟಿಕೆಗಳ ತಾಣ, ಕುಡುಕರ, ಧೂಮಪಾನಿಗಳ ಹಾವಳಿ ಬಗ್ಗೆ ಪೊಲೀಸರು ನಿಗಾವಹಿಸುವಂತೆ ಸಾಕಷ್ಟು ಜನರು ಒತ್ತಾಯಿಸಿದ್ದಾರೆ. ವರದಹಳ್ಳಿಯ ರಸ್ತೆಯ ಹೆಲಿಪ್ಯಾಡ್, ನಗರದ ಹೊರವಲಯ, ವಿನೋಬಾನಗರದ ಹಾನಂಬಿ ಹೊಳೆಯ ಗದ್ದೆದಡ, ಬೈಪಾಸ್ ರಸ್ತೆ ಇನ್ನಿತರ ಭಾಗಗಳಲ್ಲಿ ಸಹ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಗುಂಪು ಸೇರುವುದು, ವಿಡಿಯೋ ಗೇಮ್ ಆಡುವುದು, ಮಾದಕ ವಸ್ತು, ಮದ್ಯಪಾನ, ಧೂಮಪಾನ ಸೇವನೆ ಇನ್ನಿತರ ಚಟುವಟಿಕೆಗಳನ್ನು ಮಾಡುತ್ತಿದ್ದು, ಪೊಲೀಸರು ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next