Advertisement

SIM: ಸಿಮ್‌ ವಿತರಕರಿಗೆ ಪೊಲೀಸ್‌ ಪರಿಶೀಲನೆ ಕಡ್ಡಾಯ – ನಿಯಮ ಉಲ್ಲಂಘನೆಗೆ 10 ಲಕ್ಷ ರೂ. ದಂಡ

08:23 PM Aug 17, 2023 | Team Udayavani |

ನವದೆಹಲಿ: ಭಾರತದಲ್ಲಿ ಮೊಬೈಲ್‌ ಬಳಕೆದಾರರ ಪ್ರಮಾಣ ಅಗಾಧವಾಗಿದೆ, ಹಾಗೆಯೇ ಬೇಕಾಬಿಟ್ಟಿಯಾಗಿ ಸಿಮ್‌ ಖರೀದಿಸಿ ಎಸೆಯುವುದು ಹೆಚ್ಚಿದೆ. ಇದರಿಂದ ಹಲವು ಅಕ್ರಮಗಳು ನಡೆಯುತ್ತಿವೆ. ಇದರ ಮೇಲೆ ನಿಯಂತ್ರಣ ಹೇರಲು ಬಲವಾದ ನಿರ್ಧಾರ ಮಾಡಿರುವ ಕೇಂದ್ರ ಸರ್ಕಾರ, ಸಿಮ್‌ ಕಾರ್ಡ್‌ ವಿತರಕರಿಗೆ ಪೊಲೀಸ್‌ ಪರಿಶೀಲನೆ ಕಡ್ಡಾಯ ಮಾಡಿದೆ. ಹಾಗೆಯೇ ಒಂದೇ ಬಾರಿಗೆ ಬೃಹತ್‌ ಪ್ರಮಾಣದಲ್ಲಿ ಸಿಮ್‌ ಸಂಪರ್ಕ ನೀಡುವುದಕ್ಕೂ ತಡೆ ನೀಡಿದೆ.

Advertisement

ಈಗಾಗಲೇ ಸರ್ಕಾರ 52 ಲಕ್ಷ ಮೊಬೈಲ್‌ ಸಿಮ್‌ಗಳನ್ನು ನಿಷ್ಕ್ರಿಯ ಮಾಡಿದೆ. 10 ಲಕ್ಷ ಸಿಮ್‌ ಡೀಲರ್‌ಗಳ ಪೈಕಿ, 67,000 ಮಂದಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. 300 ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ ಎಂದು ಕೇಂದ್ರ ಸಚಿವ ಅಶ್ವಿ‌ನಿ ವೈಷ್ಣವ್‌ ಹೇಳಿದ್ದಾರೆ. ವಾಟ್ಸ್‌ಆ್ಯಪ್‌ ಕಂಪನಿಯೇ 66,000 ಖಾತೆಗಳನ್ನು ಬ್ಲಾಕ್‌ ಮಾಡಿದೆ, ಇದು ಅಕ್ರಮಗಳ ಪ್ರಮಾಣಕ್ಕೆ ಸಾಕ್ಷಿ ಎಂದು ಸಚಿವರು ಹೇಳಿದ್ದಾರೆ.

ನಿಯಮಗಳನ್ನು ಉಲ್ಲಂ ಸಿ ಸಂಪರ್ಕ ನೀಡುವ ವಿತರಕರಿಗೆ 10 ಲಕ್ಷ ರೂ. ದಂಡ ಹಾಕಲಾಗುತ್ತದೆ. ಹಾಗೆಯೇ ಪೊಲೀಸ್‌ ಪರಿಶೀಲನೆ ಮಾಡಿಸಿಕೊಳ್ಳಲು ಬೇಕಾದಷ್ಟು ಸಮಯಾವಕಾಶ ನೀಡಲಾಗಿದೆ ಎಂದಿದ್ದಾರೆ ವೈಷ್ಣವ್‌.

Advertisement

Udayavani is now on Telegram. Click here to join our channel and stay updated with the latest news.

Next