Advertisement

ಗಣಿ ಇಲಾಖೆಗೂ ಪೊಲೀಸ್‌ ಮಾದರಿ ಸಮವಸ್ತ್ರ

10:06 AM Dec 19, 2019 | Lakshmi GovindaRaj |

ಕೊಪ್ಪಳ: ರಾಜ್ಯದಲ್ಲಿ ಅಕ್ರಮ ಮರಳು ಸಾಗಾಟ ನಿಯಂತ್ರಣಕ್ಕೆ ಮರಳು ನೀತಿ ಮಾರ್ಪಾಡು ಸೇರಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಪೊಲೀಸ್‌ ಮಾದರಿ ವಿಶೇಷ ಸಮವಸ್ತ್ರ ಜಾರಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಗಣಿ ಇಲಾಖೆ ಒಂದೇ ಅಕ್ರಮ ಮರಳು ದಂಧೆ ನಿಯಂತ್ರಿಸಲು ಅಸಾಧ್ಯವೆಂದು ನಿರ್ಧರಿಸಿ ಅಧಿಕಾರವನ್ನು ಇತರೆ ಇಲಾಖೆಗಳಿಗೂ ಹಂಚಿಕೆ ಮಾಡಿತ್ತು.

Advertisement

ಕಾಯ್ದೆಯಲ್ಲಿ ಕೆಲವು ಬದಲಾವಣೆ ತಂದು ಲೋಕೋಪಯೋಗಿ, ಪೊಲೀಸ್‌, ಅರಣ್ಯ, ತಾಪಂ, ತಹಶೀಲ್ದಾರ್‌, ಕಂದಾಯ ನಿರೀಕ್ಷಕರು ಸೇರಿ ಗ್ರಾಮ ಲೆಕ್ಕಾಧಿಕಾರಿಗೂ ವಿಶೇಷ ಅಧಿಕಾರ ನೀಡಿ ಅಕ್ರಮ ಮರಳು ದಂಧೆ ಮಾಹಿತಿ ದೊರೆತರೆ ನೇರವಾಗಿ ದಾಳಿ ಮಾಡಿ ಪ್ರಕರಣ ದಾಖಲಿಸಲು ಅಧಿ ಕಾರ ನೀಡಲಾಗಿತ್ತು. ಆದರೆ ಕೆಲ ಇಲಾಖೆಗಳು ಇದರಲ್ಲಿ ಆಸಕ್ತಿ ವಹಿಸದ ಹಿನ್ನೆಲೆಯಲ್ಲಿ ಗಣಿ ಇಲಾಖೆಗೆ ಅಕ್ರಮ ನಿಯಂತ್ರಣಕ್ಕೆ ಮತ್ತೆ ದೊಡ್ಡ ತಲೆ ನೋವಾಗಿದೆ. ಹೀಗಾಗಿ ಇಲಾಖೆಯಲ್ಲಿಯೇ ಕೆಲ ಮಾರ್ಪಾಡಿಗೆ ಸರ್ಕಾರ ಸಿದ್ಧತೆ ನಡೆಸಿದೆ.

ಭಯ ಮೂಡಿಸಲು: ಪ್ರಸ್ತುತ ಬಿಜೆಪಿ ಸರ್ಕಾರ ಮರಳು ನೀತಿಗೆ ಮತ್ತೆ ಹೊಸ ರೂಪ ನೀಡಲು ಮುಂದಾಗಿದ್ದು, ವಿವಿಧ ರಾಜ್ಯಕ್ಕೆ ತೆರಳಿ ಅಲ್ಲಿನ ಮರಳು ನೀತಿ ಕುರಿತು ಅಧ್ಯಯನ ನಡೆಸಿದೆ. ತೆಲಂಗಾಣ ಮಾದರಿ ಮರಳು ನೀತಿ ಜಾರಿಗೂ ಚಿಂತನೆ ನಡೆಸಿದೆ. ಇದರೊಟ್ಟಿಗೆ ಇಲಾಖೆ ಅಧಿ ಕಾರಿ ವರ್ಗಕ್ಕೂ ಸಮವಸ್ತ್ರ ಜಾರಿಗೆ ಸಿದ್ಧತೆ ನಡೆಸಿದೆ. ಇಲಾಖೆ ಅಧಿ ಕಾರಿಗಳು ದಾಳಿ ನಡೆಸಿದಾಗ ಗುರುತು ಮಾಡುವುದೇ ತುಂಬಾ ಸಮಸ್ಯೆ. ಹೀಗಾಗಿ ಇವರಿಗೆ ವಿಶೇಷ ಸಮವಸ್ತ್ರವಿದ್ದರೆ ಎಲ್ಲಾ ಅನುಕೂಲವಾಗಲಿದೆ. ಇನ್ನು ಗಣಿ ಇಲಾಖೆ ಅಧಿಕಾರಿಗಳಿಗೂ ಹೆದರದ ದಂಧೆಕೋರರಿದ್ದು ಅವರಿಗೆ ಭಯ ಮೂಡಿಸಲು ಗಣಿ ಇಲಾಖೆಗೆ ಪೊಲೀಸ್‌ ಮಾದರಿ ಸಮವಸ್ತ್ರ ಜಾರಿಗೆ ತರಲು ತಯಾರಿ ನಡೆಸಿದೆ.

ಪೊಲೀಸ್‌ ಮಾದರಿಯೇ ಏಕೆ?: ಸಚಿವ ಸಿ.ಸಿ.ಪಾಟೀಲ್‌ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹೊಣೆ ಹೊತ್ತಿದ್ದಾರೆ. ಸಮವಸ್ತ್ರದ ಕುರಿತು ಇಲಾಖೆ ಉನ್ನತ ಮಟ್ಟದ ಅಧಿಕಾರಿ ವರ್ಗದ ಜತೆ ಚರ್ಚೆ ನಡೆಸಿದ್ದು, ಇದರ ಸಾಧಕ-ಬಾಧಕಗಳ ಕುರಿತು ಪರಾಮರ್ಶೆ ನಡೆಯುತ್ತಿವೆ. ಈ ಹಿಂದೆಯೂ ಸಮವಸ್ತ್ರ ಜಾರಿ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದ್ದರೂ ಅಷ್ಟೇನು ಚರ್ಚೆಗೆ ಬಂದಿರಲಿಲ್ಲ. ಆಗ ಗಣಿ ಅಧಿ ಕಾರಿಗೆ ದಾಳಿ ನಡೆಸುವ ವೇಳೆ ಭದ್ರತೆಗೆ ಗನ್‌ ಕೊಡಬೇಕೆನ್ನುವ ಪ್ರಸ್ತಾವನೆಯೂ ಇತ್ತು. ಮತ್ತೆ ಈಗ ವಿಷಯ ಮುನ್ನೆಲೆಗೆ ಬಂದಿದೆ. ಪೊಲೀಸ್‌ ಸಮವಸ್ತ್ರ ನೋಡಿದಾಕ್ಷಣ ಜನರಲ್ಲಿ ಅಪರಾಧ ಮಾಡದಂತ ಭಾವನೆ ಬರುತ್ತವೆ. ಹೀಗಾಗಿ ಗಣಿ ಅಧಿಕಾರಿಗೂ ಪೊಲೀಸ್‌ ಮಾದರಿ ಸಮವಸ್ತ್ರ ಜಾರಿಯ ಚರ್ಚೆ ನಡೆದಿವೆ.

ಇಲಾಖೆ ಅ ಧಿಕಾರಿಗಳಿಗೆ ಪೊಲೀಸ್‌ ಮಾದರಿ ಸಮವಸ್ತ್ರ ಜಾರಿ ತರುವ ಚಿಂತನೆ ನಡೆದಿದೆ. ಇದರಿಂದ ಅಧಿ ಕಾರಿ ವರ್ಗದಲ್ಲೂ ಒಂದು ರೀತಿಯಲ್ಲಿ ಶಿಸ್ತು, ಸಮಯ ಪ್ರಜ್ಞೆ ಬರುತ್ತದೆ. ಸಾರ್ವಜನಿಕರಲ್ಲೂ ಇವರನ್ನು ಬೇಗನೆ ಗುರುತು ಹಿಡಿಯಲು ಸಾಧ್ಯವಾಗಲಿದೆ. ಈಗಾಗಲೇ ಅಧಿ ಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ.
-ಸಿ.ಸಿ.ಪಾಟೀಲ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ

Advertisement

* ದತ್ತು ಕಮ್ಮಾರ

Advertisement

Udayavani is now on Telegram. Click here to join our channel and stay updated with the latest news.

Next