ನವದೆಹಲಿ: ದೆಹಲಿ ಮೆಟ್ರೋದಲ್ಲಿ ಜೋಡಿಯೊಂದು ಅಸಭ್ಯವಾಗಿ ವರ್ತಿಸಿದ್ದ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದ ಹಿನ್ನೆಲೆ ಇಂಥ ಅಸಭ್ಯ ಘಟನೆಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮೆಟ್ರೋದಲ್ಲಿ ಮಫ್ತಿ ಪೊಲೀಸರನ್ನು ಗಸ್ತಿಗಾಗಿ ನಿಯೋಜಿಸಲಾಗಿದೆ ಎಂದು ದೆಹಲಿ ಮೆಟ್ರೋ ರೈಲು ಕಾರ್ಪೋರೇಷನ್ ಮಂಗಳವಾರ ತಿಳಿಸಿದೆ.
ಮೆಟ್ರೋ ಆವರಣದಲ್ಲಿ, ರೈಲಿನಲ್ಲಿ ಯಾವುದೇ ಅನುಚಿತ ಘಟನೆ ನಡೆದರೂ ಕಾನೂನು ಕ್ರಮ ಜರುಗಿಸಲಾಗುತ್ತದೆ.ಅಲ್ಲದೇ, ಮೆಟ್ರೋ ರೈಲುಗಳ ಒಳಗೆ ಭದ್ರತಾ ಸಿಬ್ಬಂದಿ ಕಣಿಪ್ಪಿಸಲು ಸಾಧ್ಯವಿಲ್ಲ.
ದೆಹಲಿ ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿ ( ಪೊಲೀಸ್ ಸಮವಸ್ತ್ರವಲ್ಲದ ಸಾಧಾರಣ ವಸ್ತ್ರ) ರೈಲಿನ ಒಳಗೆ ಗಸ್ತು ನಡೆಸಲಿದ್ದಾರೆ ಎಂದು ಡಿಸಿಪಿ ಜಿತೇಂದ್ರ ಮಣಿ ತಿಳಿಸಿದ್ದಾರೆ.