Advertisement
ಮುಳಬಾಗಿಲು ತಾಲೂಕಿನ ಅತ್ಯಂತ ಸೂಕ್ಷ್ಮ ಪ್ರದೇಶವೆಂದೇ ಹೆಸರಾಗಿದ್ದ ತಾಯಲೂರು ಹೋಬಳಿಯ 73 ಹಳ್ಳಿಗಳಲ್ಲಿ ಸಾವಿರಾರು ಜನರು ವಾಸ ವಾಗಿದ್ದು, ಸುಮಾರು 1865ರಲ್ಲಿ ಆಂಗ್ಲರು ಉತ್ತಮ ಕಾನೂನು ಸುವ್ಯವಸ್ಥೆ ಕಾಪಾಡಲೆಂದು ತಾಯಲೂರಲ್ಲಿ ಪೊಲೀಸ್ ಹೊರ ಠಾಣೆ ಮಂಜೂರು ಮಾಡಿ ಠಾಣೆಗೆ ಅಗತ್ಯವುಳ್ಳ ಕಟ್ಟಡ ನಿರ್ಮಾಣಕ್ಕಾಗಿ ಸ.ನಂ.35ರಲ್ಲಿ 4.1ಎಕರೆ ಜಮೀನು ಮತ್ತು ಎಎಸ್‌ಐ, 1 ಎಚ್.ಸಿ, 2 ಪಿ.ಸಿ.ಹುದ್ದೆಗಳನ್ನು ಮಂಜೂರು ಮಾಡಿರುತ್ತಾರೆ.
Related Articles
Advertisement
ಕಂದಾಯ ಇಲಾಖೆಗೆ ಪತ್ರ: ಆದರೆ, ಪ್ರತಿ 2 ವರ್ಷಗಳಿಗೊಮ್ಮೆ ವರ್ಗಾವಣೆಯಾಗಿ ಮುಳಬಾಗಿಲು ಠಾಣೆಗೆ ಬರುವ ಪಿಎಸ್‌ಐಗಳು ಠಾಣೆಯ ಜಮೀ ನನ್ನು ಸರ್ವೆ ಮಾಡಿಸಿ ಹದ್ದು ಬಸ್ತು ಮಾಡಿ ಕೊಡಲು ಹಲವಾರು ವರ್ಷಗಳಿಂದಲೂ ತಾಪಂ ಇಒ ಮತ್ತು ತಹಶೀಲ್ದಾರ್‌ಗಳಿಗೆ ಪತ್ರ ವ್ಯವಹಾರ ನಡೆಸಿದ್ದಾರೆ, ಅಂತೆಯೇ 2014ರಲ್ಲಿ ಅಂದಿನ ಪಿಎಸ್‌ಐ ಎಂ. ಶಂಕರಪ್ಪ ಸಹ ಹೊರ ಠಾಣೆ ಜಮೀನು ಸರ್ವೆ ಮಾಡಲು ಕಂದಾಯ ಇಲಾಖೆಗೆ ಪತ್ರ ಬರೆದಿದ್ದರು.
ಕುಡಿಯುವ ನೀರಿನ ಘಟಕ ನಿರ್ಮಾಣ: ಅಲ್ಲಿಗೂ ಸುಮ್ಮನಾಗದ ಅಲ್ಲಿನ ಸ್ಥಳೀಯ ಮುಖಂಡರು 2016ರ ಜುಲೈ ತಿಂಗಳಿನಲ್ಲಿ ಠಾಣೆಯ ಮುಂಭಾಗ ದಲ್ಲಿಯೇ ಕುಡಿಯುವ ನೀರಿನ ಘಟಕ ನಿರ್ಮಿಸಲು ಪಾಯ ಹಾಕುತ್ತಿದ್ದಂತೆ ಅಂದಿನ ಸಿಪಿಐ ರಾಮರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ತಡೆದಿದ್ದರು, ಆದರೆ ಮುಖಂ ಡರು ಸ್ಥಳೀಯ ಪೊಲೀಸ್ ಅಧಿಕಾರಿಗಳ ಮಾತನ್ನು ಲೆಕ್ಕಿಸದೇ ಅದೇ ದಿನ ರಾತ್ರಿಯಲ್ಲಿಯೇ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದರಿಂದ ಮರು ದಿನ ಹೊರ ಠಾಣೆ ಯಲ್ಲಿದ್ದ ಪೊಲೀಸರು ಗ್ರಾಮದ ಜನರೆದುರು ನಗೆಪಾಟಲಿಗೆ ಈಡಾಗಬೇಕಾದ ಸನ್ನಿವೇಶ ಉಂಟಾಗಿತ್ತು.
ಸರ್ವೆ ಮಾಡದ ಅಧಿಕಾರಿಗಳು: ಆ ಸಂದರ್ಭದಲ್ಲಿ ತಾಯಲೂರು ಗ್ರಾಪಂ ಪಿಡಿಒ ಆಗಿದ್ದ ನಾರಾಯಣ ಸ್ವಾಮಿ ಸಹ ಪೊಲೀಸ್ ಠಾಣೆಯ ಜಮೀನು ಸರ್ವೆ ಮಾಡಿಸಿಕೊಳ್ಳಲಿ, ತಮ್ಮ ಗ್ರಾಪಂ ವ್ಯಾಪ್ತಿಯಲ್ಲಿದ್ದರೆ ಬಿಟ್ಟು ಕೊಡುವುದಾಗಿ ತಿಳಿಸಿ ದ್ದರು. ಆದರೆ, ಅಧಿಕಾರಿಗಳು ಸರ್ವೆ ಮಾಡದೇ ಕಾರಣ ಪೊಲೀಸರ ಪ್ರಯತ್ನ ವಿಫಲಗೊಂಡಿದ್ದರಿಂದ ಇಂದಿಗೂ ಪೊಲೀಸ್ ಹೊರ ಠಾಣೆ ಜಮೀನು ಪರರ ವಶದಲ್ಲಿದೆ, ಆದರೆ ಕಳೆದ 7-8 ತಿಂಗಳಿಂದ ಸದರೀ ಹೊರ ಠಾಣೆಯಲ್ಲಿ ಪೊಲೀ ಸರು ಕರ್ತವ್ಯ ನಿರ್ವಹಿಸದೇ ಠಾಣೆಗೆ ಬೀಗ ಹಾಕಿರುವುದರಿಂದ ಹಾಳು ಕೊಂಪೆಯಂತಾಗಿದೆ.
ತಾಯಲೂರು ಹೊರ ಠಾಣೆಗೆ ಮರಳಿ ದಕ್ಕುವುದೇ?: ಒಟ್ಟಿನಲ್ಲಿ ಆಂಗ್ಲರ ಕಾಲದಲ್ಲಿಯೇ ತಾಯಲೂರು ಹೊರ ಠಾಣೆಗೆ ಸಾಕಷ್ಟು ಜಮೀನು ಮಂಜೂರಾಗಿದ್ದರೂ ಮುಖಂಡರು ವಿವಿಧ ಕಾರಣಗಳಿಗಾಗಿ ಬಹುತೇಕ ಜಮೀನನ್ನು ಅತಿಕ್ರಮಿಸಿಕೊಂಡಿದ್ದು ಇನ್ನಾದರೂ ಜಿಲ್ಲಾ ರಕ್ಷಣಾಧಿಕಾರಿಗಳಾದ ಎಂ.ನಾರಾಯಣ ಅವರ ಅಧಿಕಾರದಲ್ಲಾದರೂ ಪರರ ಪಾಲಾಗಿರುವ ಆಂಗ್ಲರ ಕಾಲದ ಜಮೀನು ತಾಯಲೂರು ಹೊರ ಠಾಣೆಗೆ ಮರಳಿ ದಕ್ಕುವುದೇ..? ಕಾದು ನೋಡಬೇಕಾಗಿದೆ.
ಎಲ್ಲಿ ಏನೇ ಕಳುವಾದರೂ ಹುಡುಕಿ ಕೊಡುವ ಪೊಲೀಸ ರಿಗೆ ತನ್ನದೇ ನೂರಾರು ವರ್ಷಗಳ ಹಿಂದೆ ತಾಯಲೂರು ಹೊರ ಠಾಣೆಗೆ 4.1 ಎಕರೆ ಜಮೀನು ಮಂಜೂರಾಗಿದ್ದರೂ, ಅದರಲ್ಲಿ ಸಾಕಷ್ಟು ಜಮೀನು ಕೆಲವು ದಶಕಗಳಿಂದ ಪರರ ಪಾಲಾಗಿದ್ದರೂ ಸ್ಥಳೀಯ ಪೊಲೀಸರಿಂದ ವಶಪಡಿಸಿಕೊಳ್ಳಲಾಗದೇ ಇರುವುದರಿಂದ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಇತ್ತ ಕಡೆ ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ. – ಮುರಳಿ, ದಲಿತ ಮುಖಂಡ ಮುಳಬಾಗಿಲು
ಮುಳಬಾಗಿಲು ತಾಲೂಕು ಗ್ರಾಮಾಂತರ ಠಾಣೆ ಮತ್ತು ತಾಯಲೂರು ಹೊರ ಠಾಣೆಗೆ ಮಂಜೂರಾಗಿದ್ದ ಜಮೀನುಗಳು ಹಲವಾರು ವರ್ಷಗಳ ಹಿಂದೆಯೇ ಬೇರೆ ಬೇರೆ ಕಾರಣಗಳಿಗೆ ಬೇರೆ ಸಂದರ್ಭದಲ್ಲಿ ಪರಬಾರೆಯಾಗಿದ್ದು, ಸರ್ವೆ ಮಾಡಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಶೀಘ್ರವೇ ಸರ್ವೆ ಕಾರ್ಯ ನಡೆಯಲಿದೆ. – ಎಂ.ನಾರಾಯಣ್, ಜಿಲ್ಲಾ ರಕ್ಷಣಾಧಿಕಾರಿಗಳು ಕೋಲಾರ
-ಎಂ.ನಾಗರಾಜಯ್ಯ.