ಮಂಗಳೂರು: ವಿಧಾನ ಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಶ್ಚಿಮ ವಲಯದ ವಿವಿಧ ಪೊಲೀಸ್ ಠಾಣೆಗಳ ಪಿಎಸ್‌ಐಗಳನ್ನು ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ.
ಕಾರ್ಕಳ ಗ್ರಾಮಾಂತರ ಠಾಣೆಯ ಶುಭಕರ ಅವರನ್ನು ಬರ್ಕೆ ಠಾಣೆಗೆ, ಪಡುಬಿದ್ರಿ ಠಾಣೆಯ ಪ್ರಕಾಶ್ ಸಾಲಿಯಾನ್ ಅವರನ್ನು ಮಂಗಳೂರು ಸಂಚಾರ ಉತ್ತರ ಠಾಣೆಗೆ, ಶಂಕರ ನಾರಾಯಣ ಠಾಣೆಯ ಸುದರ್ಶನ್ ಬಿ.ಎನ್. ಅವರನ್ನು ಉರ್ವಕ್ಕೆ, ಮಂಕಿ ಠಾಣೆಯ ಮುಷಾಹಿದ್ ಅಹಮ್ಮದ್ ಅವರನ್ನು ಮಂಗಳೂರು ಮಹಿಳಾ ಠಾಣೆಗೆ, ಗೋಕರ್ಣ ಠಾಣೆಯ ಸುಧಾ ಟಿ. ಅಘನಾಶಿನಿ ಅವರನ್ನು ಪಣಂಬೂರಿಗೆ, ಚಿತ್ತಾಕುಲ ಠಾಣೆಯ ಕಲ್ಪನಾ ಬಂಗ್ಲೆ ಅವರನ್ನು ಕಂಕನಾಡಿ ನಗರಕ್ಕೆ, ಹೊನ್ನಾವರದ ಗಣೇಶ್ ಎಚ್. ನಾಯಕ್ ಅವರನ್ನು ಕೊಣಾಜೆಗೆ, ಜೋಯಿಡಾದ ಮಹದೇವಿ ಅವರನ್ನು ಮಂಗಳೂರು ಗ್ರಾಮಾಂತರಕ್ಕೆ, ಶಿರಸಿ ಹೊಸ ಮಾರ್ಕೆಟ್ ಠಾಣೆಯ ಮಾಲಿನಿ ಹಂಸಬಾವಿ ಅವರನ್ನು ಮಂಗಳೂರು ಗ್ರಾಮಾಂತರಕ್ಕೆ, ಹೊನ್ನಾವರ ಸಂಚಾರ ಠಾಣೆಯ ಮಂಜೇಶ್ವರ್ ಚಂದಾವರ್ ಅವರನ್ನು ಉಳ್ಳಾಲಕ್ಕೆ, ಹೊನ್ನಾವರದ ಸಾವಿತ್ರಿ ನಾಯಕ್ ಅವರನ್ನು ಮೂಡುಬಿದಿರೆಗೆ, ಯಲ್ಲಾಪುರದ ಶ್ಯಾಮ್ ಪಾವಸ್ಕರ್ ಅವರನ್ನು ಮಂಗಳೂರು ಪೂರ್ವಕ್ಕೆ, ಚಿಕ್ಕಮಗಳೂರು ತರಿಕೆರೆ ಠಾಣೆಯ ಚಂದ್ರಮ್ಮ ವೈ.ಎನ್. ಅವರನ್ನು ಮಂಗಳೂರು ಸಂಚಾರ ಉತ್ತರಕ್ಕೆ, ಚಿಕ್ಕಮಗಳೂರು ಗ್ರಾಮಾಂತರ ಸಂಚಾರ ಠಾಣೆಯ ಮುದ್ದಪ್ಪ ಬಿ.ಇ. ಅವರನ್ನು ಮಂಗಳೂರು ಸಂಚಾರ ದಕ್ಷಿಣಕ್ಕೆ, ಚಿಕ್ಕಮಗಳೂರು ಎನ್.ಆರ್. ಪುರ ಠಾಣೆಯ ಜ್ಯೋತಿ ಎನ್.ಎ. ಅವರನ್ನು ಕಂಕನಾಡಿ ನಗರಕ್ಕೆ, ಚಿಕ್ಕಮಗಳೂರು ಗ್ರಾಮಾಂತರ ಠಾಣೆಯ ಗೇಣೋಜಿ ಕೆ.ಟಿ. ಅವರನ್ನು ಕಂಕನಾಡಿ ನಗರಕ್ಕೆ, ಆಲ್ದೂರು ಠಾಣೆಯ ಕೀರ್ತಿಕುಮಾರ್ ಎಚ್.ಡಿ. ಅವರನ್ನು ಮೂಡುಬಿದಿರೆಗೆ, ಬೀರೂರು ಠಾಣೆಯ ಬಸವರಾಜಪ್ಪ ಎಚ್. ಅವರನ್ನು ಮಂಗಳೂರು ಸಂಚಾರ ಪೂರ್ವ ಠಾಣೆಗೆ, ಚಿಕ್ಕಮಗಳೂರು ನಗರ ಠಾಣೆಯ ಸತೀಶ್ ಕೆ.ಎಸ್. ಅವರನ್ನು ಮಂಗಳೂರು ಸಂಚಾರ ಪಶ್ಚಿಮಕ್ಕೆ, ಪಂಚನಹಳ್ಳಿ ಠಾಣೆಯ ಲೀಲಾವತಿ ಆರ್. ಅವರನ್ನು ಮಂಗಳೂರು ಸೆನ್ ಕ್ರೈಂ ಠಾಣೆಗೆ, ಕಾಪು ಠಾಣೆಯ ಶ್ರೀಶೈಲ ಮುರಗೋಡ ಅವರನ್ನು ವೇಣೂರು ಠಾಣೆಗೆ, ಭಟ್ಕಳ ಠಾಣೆಯ ಸುಮಾ ಕಾಪುವಿಗೆ, ಕುದುರೆಮುಖ ಠಾಣೆಯ ಶಿವರುದ್ರಮ್ಮ ಪಡುಬಿದ್ರಿ ಕ್ರೈಂಗೆ ವರ್ಗಾಯಿಸಲಾಗಿದೆ.