Advertisement

ಕಲಬುರಗಿ: ದರೋಡೆಕೋರರಿಬ್ಬರ ಕಾಲಿಗೆ ಪೊಲೀಸರ ಗುಂಡು 

10:17 AM Apr 12, 2018 | Team Udayavani |

ಕಲಬುರಗಿ: ನಗರದ ಹೊರವಲಯದ ಆಶ್ರಯ ಕಾಲೋನಿ ಬಳಿ ದರೋಡೆಕೋರರಿಬ್ಬರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. 

Advertisement

ಬಂಧನಕ್ಕೆ ಮುಂದಾದಾಗ ಪೇದೆಗಳಾದ ಬಂದೇನವಾಜ್‌ ಮತ್ತು ಭೀಮಾ ನಾಯಕ್‌  ಮೇಲೆ ದುಷ್ಕರ್ಮಿಗಳಾದ ಶೇಖರ್‌ ಮತ್ತು ಅಜೀಂ ದಾಳಿ ನಡೆಸಿದ್ದು ಈ ವೇಳೆ ಆತ್ಮ ರಕ್ಷಣೆಗಾಗಿ ಪಿಎಸ್‌ಐಗಳಾದ ಪರಶುರಾಮ ಮತ್ತು ವಹೀದ್‌ ಕೋತ್ವಾಲ್‌ ಅವರು ಗುಂಡು ಹಾರಿಸಿದ್ದಾರೆ.

ಗಾಯಾಳು ದರೋಡೆಕೋರರನ್ನು ಸ್ಥಳದಲ್ಲೇ ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next