ಶಿವಮೊಗ್ಗ: ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿಯೊಬ್ಬ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಶಿವಮೊಗ್ಗ ಬುದ್ಧನಗರದ ಅರ್ಷದ್ ಖಾನ್ (24) ಎಂಬಾತನೇ ಗುಂಡಿನೇಟು ತಿಂದ ರೌಡಿ. ತುಂಗಾನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ.
ಸುಲಿಗೆ, ಡಕಾಯಿತನ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಅರ್ಷದ್ ಕೊಲೆ ಪ್ರಕರಣವೊಂದರಲ್ಲಿ ಜಾಮೀನು ಪಡೆದು, ಹೊರಬಂದಿದ್ದ. ಇಂದು ಮುಂಜಾನೆ 8.30 ರಿಂದ 9 ಗಂಟೆ ಸಮಯದಲ್ಲಿ ಅರ್ಷದ್ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾದ ವೇಳೆ ತುಂಗಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ್ ಅವರು ಅರ್ಷದ್ ಕಾಲಿಗೆ ಗುಂಡು ಹೊಡೆದಿದ್ದಾರೆ.
ಇದನ್ನೂ ಓದಿ:ವಿಹೆಚ್‌ಪಿ ಹಾಗೂ ಭಜರಂಗದಳ ಮಂದಿರ ಚಲೋ ಕರೆ: ಶ್ರೀರಂಗಪಟ್ಟಣ ಮಸೀದಿ ಸುತ್ತ ನಿಷೇಧಾಜ್ಞೆ
Related Articles
ಶಿವಮೊಗ್ಗ ನಗರದ ಹೊರವಲಯದ ಅನುಪಿನಕಟ್ಟೆ ಬಳಿ ಈ ಘಟನೆ ನಡೆದಿದ್ದು, ಪೊಲೀಸರ ಗುಂಡಿನ ದಾಳಿಗೆ ಒಳಗಾದ ಆರೋಪಿ ಅರ್ಷದ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.