Advertisement

ಹಲ್ಲೆ ನಡೆಸಿದವರಿಗೆ 1 ಲಕ್ಷ ರೂ.: ತಮಿಳು ನಟ ಸೂರ್ಯ ನಿವಾಸಕ್ಕೆ ಬಿಗಿ ಭದ್ರತೆ

07:13 PM Nov 17, 2021 | Team Udayavani |

ಚೆನ್ನೈ : ಜೈ ಭೀಮ್ ಚಿತ್ರದ ದೃಶ್ಯವೊಂದನ್ನು ವಿರೋಧಿಸಿ ನಾಯಕನ ಮೇಲೆ ಹಲ್ಲೆ ನಡೆಸಿದವರಿಗೆ 1 ಲಕ್ಷ ರೂಪಾಯಿ ನೀಡುವುದಾಗಿ ಪಿಎಂಕೆ ನಾಯಕ ಘೋಷಿಸಿದ ಬಳಿಕ ಖ್ಯಾತ ನಟ ಸೂರ್ಯ ಅವರ ನಿವಾಸದ ಭದ್ರತೆಯನ್ನು ಬುಧವಾರದಿಂದ ಹೆಚ್ಚಿಸಲಾಗಿದೆ.

Advertisement

ನಟನ ಮೇಲೆ ಹಲ್ಲೆ ನಡೆಸಿದವರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪಿಎಂಕೆ ಜಿಲ್ಲಾ ಕಾರ್ಯದರ್ಶಿ ಪಳನಿಸ್ವಾಮಿ ಅವರು ಘೋಷಿಸಿದ್ದರು. ಆ ಹಿನ್ನೆಲೆಯಲ್ಲಿ ಚೆನ್ನೈನ ಟಿ ನಗರದಲ್ಲಿರುವ ನಟ ಸೂರ್ಯ ಅವರ ನಿವಾಸಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಪಳನಿಸ್ವಾಮಿ ವಿರುದ್ಧ ಪೊಲೀಸರು ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಜೈ ಭೀಮ್ ಚಿತ್ರದಲ್ಲಿ ಜನಾಂಗವೊಂದನ್ನು ನಿಂದಿಸಲಾಗಿದೆ ಎಂದು ಪಳನಿ ಸ್ವಾಮಿ ಈ ಘೋಷಣೆ ಮಾಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next