ಶ್ರೀನಗರ: ಇಲ್ಲಿನ ದಾಲ್ ಸರೋವರದಲ್ಲಿ ಭಾರೀ ಗಾಳಿಗೆ ಸಿಲುಕಿದ್ದ 21 ಪ್ರವಾಸಿಗರನ್ನು ಪೊಲೀಸರು ಸೋಮವಾರ ರಕ್ಷಿಸಿದ್ದಾರೆ.
“ಶ್ರೀನಗರ ಪೊಲೀಸ್‌ನ ರಿವರ್ ಪೊಲೀಸ್ ವಿಭಾಗವು ಸ್ಪೀಡ್ ಬೋಟ್‌ಗಳ ಮೂಲಕ 21 ಮಂದಿ ಪ್ರವಾಸಿಗರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಹಠಾತ್ ಹವಾಮಾನ ಬದಲಾವಣೆ ಮತ್ತು ಬಿರುಸಿನ ಗಾಳಿಯಿಂದಾಗಿ ಪ್ರವಾಸಿಗರು ದಾಲ್ ಸರೋವರದ ಶಿಕಾರದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ, ”ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ.
ಪ್ರತಿಕೂಲ ವಾತಾವರಣದಲ್ಲಿ ಜನರು ಕೆರೆಯೊಳಗೆ ಹೋಗದಂತೆ ಪೊಲೀಸರು ಸೂಚಿಸಿದರು.ಶ್ರೀನಗರ ಸೇರಿದಂತೆ ಕಾಶ್ಮೀರದ ಹಲವು ಭಾಗಗಳಲ್ಲಿ ಮಧ್ಯಾಹ್ನದ ನಂತರ ಮಳೆ ಸುರಿದಿದೆ. ಕಣಿವೆಯಲ್ಲಿ ಮುಂದಿನ ಮೂರು ದಿನಗಳಲ್ಲಿ ಆರ್ದ್ರ ವಾತಾವರಣ ಇರಲಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.