Advertisement

ಮಣಿಪಾಲದ ಅಪಾರ್ಟ್‌ಮೆಂಟ್‌ ಮೇಲೆ ದಾಳಿ 3.89 ಲ.ರೂ.ಮೌಲ್ಯದ ನಿಷೇಧಿತ ಮಾದಕ ವಸ್ತುಗಳು ವಶಕ್ಕೆ

08:40 PM Nov 01, 2020 | sudhir |

ಉಡುಪಿ: ಮಣಿಪಾಲದ ಅಪಾರ್ಟ್‌ಮೆಂಟ್‌ ಮೇಲೆ ದಾಳಿ ಮಾಡಿದ ಪೊಲೀಸರು 32 ಗ್ರಾಂ ವಿದೇಶಿ ಹೈಡ್ರೊವಿಡ್‌ ಗಾಂಜಾ , 9 ಗ್ರಾಂ ಬ್ರೌನ್‌ ಶುಗರ್‌ ಹಾಗೂ 25 ಎಂಡಿಎಂಎ ಮಾತ್ರೆಗಳು ಸೇರಿ ಒಟ್ಟು 3,89,000 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿ ಆದಿತ್ಯ ಪ್ರಭು (28) ಮತ್ತು ಅಮೆರಿಕ ಮೂಲದ ಅನಿವಾಸಿ ಭಾರತೀಯ ವಿದ್ಯಾರ್ಥಿ ಅನೀಶ್‌ ರಾಜನ್‌(22)ನನ್ನು ಬಂಧಿಸಲಾಗಿದೆ.

ಉಡುಪಿ ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರಚಂದ್ರ ಅವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಈ ದಾಳಿ ನಡೆದಿದೆ.

ಇದನ್ನೂ ಓದಿ:ಚತ್ತೀಸ್ ಗಢದ ದಂತೇವಾಡದಲ್ಲಿ 27 ನಕ್ಷಲರ ಶರಣಾಗತಿ

ಕಳೆದ 1 ತಿಂಗಳಿನಿಂದ ಈಚೆಗೆ ಉಡುಪಿ ಪೊಲೀಸರು ವಶಪಡಿಸಿಕೊಳ್ಳುತ್ತಿರುವ ಸಿಂಥೆಟಿಕ್‌ ಡ್ರಗ್ಸ್‌ಗಳ 4ನೇ ಪ್ರಕರಣ ಇದಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇನ್ನು ಕೆಲವು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಎನ್‌.ವಿಷ್ಣುವರ್ಧನ್‌ ತಿಳಿಸಿದ್ದಾರೆ.

Advertisement

ಅ.31ರಂದು ಆದಿತ್ಯ ಪ್ರಭುವನ್ನು ಬಂಧಿಸಲಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಆತ ನೀಡಿದ ಮಾಹಿತಿಯಂತೆ ರವಿವಾರ ಅನೀಶ್‌ ರಾಜನ್‌ನನ್ನು ಬಂಧಿಸಲಾಗಿದೆ. ಇನ್ನೂ ಹಲವರ ಬಂಧನಕ್ಕೆ ತನಿಖಾ ತಂಡ ಬಲೆ ಬೀಸಿದೆ.

ವಿಷ್ಣುವರ್ಧನ್‌ ಅವರ ಮಾರ್ಗದರ್ಶನದಲ್ಲಿ ಕುಮಾರ್‌ ಚಂದ್ರ ಅವರು ತಮ್ಮ ತಂಡದ ಸದಸ್ಯರಾದ ಡಿವೈಎಸ್‌ಪಿ ಟಿ.ಆರ್‌.ಜೈಶಂಕರ್‌, ಕುಂದಾಪುರದ ಎಎಸ್‌ಪಿ ಹರಿರಾಮ ಶಂಕರ್‌, ಮಣಿಪಾಲ ಠಾಣೆಯ ವೃತ್ತ ನಿರೀಕ್ಷಕರಾದ ಮಂಜುನಾಥ್‌ ಎಂ. ಗೌಡ, ಪಿಎಸ್‌ಐ ರಾಜಶೇಖರ್‌ ಪಿ., ಉಡುಪಿ ಸಹಾಯಕ ಡ್ರಗ್ಸ್‌ ಕಂಟ್ರೋಲರ್‌ ನಾಗರಾಜ್‌, ಗ್ರಾಮ ಲೆಕ್ಕಾಧಿಕಾರಿಯಾದ ಗಿರೀಶ್‌ ಗೌರವಗೋಶ್‌ ಮತ್ತು ಉಪೇಂದ್ರ ಕುಮಾರ್‌, ಮಣಿಪಾಲ ಠಾಣೆಯ ಸಿಬಂದಿಗಳಾದ ಆದರ್ಶ, ಆನಂದಯ್ಯ, ಸುದೀಪ ಹಾಗೂ ಡಿವೈಎಸ್‌ಪಿ ಕಚೇರಿಯ ಸಿಬಂದಿಗಳಾದ ನವೀನ್‌ ಕುಮಾರ್‌ ಶಾಂತರಾಂ ಹಾಗೂ ಹೆಚ್ಚುವರಿ ಪೊಲೀಸ್‌ ಅಧೀಕ್ಷಕರ ಕಚೇರಿಯ ಸಿಬಂದಿಗಳಾದ ಅಶೋಕ ಪಾಟಕರ್‌ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next