ಮಂಗಳೂರು: ಮಂಗಳೂರು ನಗರದಲ್ಲಿರುವ ಜೈಲಿಗೆ ಗುರುವಾರ ಬೆಳ್ಳಂಬೆಳಗ್ಗೆ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಮಾಡಿದ ದಾಳಿ ನಡೆಸಿ ಅಪಾರ ಪ್ರಮಾಣದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಜೈಲಿಗೆ ಸುಮಾರು 150 ಸಿಬಂದಿಗಳ ಜೊತೆ ದಾಳಿ ನಡೆಸಿ ಕಾರ್ಯಾಚರಣೆ ನಡೆಸಿದ ವೇಳೆ ಖೈದಿಗಳಿಂದ 25 ಮೊಬೈಲ್ ಫೋನ್‌ಗಳು, 1 ಬ್ಲೂಟೂತ್ ಸಾಧನ, 5 ಇಯರ್‌ಫೋನ್‌ಗಳು, 1 ಪೆನ್ ಡ್ರೈವ್, 5 ಚಾರ್ಜರ್‌ಗಳು, 1 ಜೊತೆ ಕತ್ತರಿ, 3 ಕೇಬಲ್‌ಗಳು ಸೇರಿದಂತೆ ಗಾಂಜಾ ಅಮಲು ಪದಾರ್ಥಗಳು ಪತ್ತೆಯಾಗಿವೆ.
ಗುರುವಾರ ಸುಮಾರು ನಾಲ್ಕು ಗಂಟೆಯ ವೇಳೆಗೆ ಇಬ್ಬರು ಡಿಸಿಪಿ, ಮೂವರು ಎಸಿಪಿ, ಸೇರಿದಂತೆ 150 ಸಿಬ್ಬಂದಿಗಳೊಂದಿಗೆ ಏಕಕಾಲಕ್ಕೆ ಜೈಲಿನೊಳಗೆ ದಾಳಿ ನಡೆಸಿ ಕಾರ್ಯಚರಣೆ ನಡೆಸಿದ ವೇಳೆ ಖೈದಿಗಳ ಬಳಿ ಮೊಬೈಲ್, ಪೆನ್ ಡ್ರೈವ್, ಗಾಂಜಾ ಸೇರಿದಂತೆ ಅಮಲು ಪದಾರ್ಥಗಳು ಪತ್ತೆಯಾಗಿದೆ.
ಜೈಲಿನೊಳಗೆ ಇಷ್ಟೊಂದು ವಸ್ತುಗಳು ಹೇಗೆ ಬಂದವು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Heavy Rain: ಭಾರೀ ಮಳೆ ಹಿನ್ನೆಲೆ; ಮಲೆನಾಡು ಭಾಗದ 6 ತಾಲೂಕಿನ ಶಾಲೆಗಳಿಗೆ ರಜೆ ಘೋಷಣೆ