Advertisement

ಗೇಮ್ಸ್‌ನಲ್ಲೀಗ ಲೈಂಗಿಕ ಕಿರುಕುಳ ಆರೋಪ!

06:55 AM Apr 05, 2018 | Team Udayavani |

ಗೋಲ್ಡ್‌ಕೋಸ್ಟ್‌: ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಈ ಆರೋಪಕ್ಕೆ ಸಂಬಂಧಿಸಿದ ದೂರನ್ನು ತನಿಖೆ ನಡೆಸುತ್ತಿರುವುದಾಗಿ ಕ್ವೀನ್‌ಲ್ಯಾಂಡ್‌ ಪೊಲೀಸರು ತಿಳಿಸಿದ್ದಾರೆ.

Advertisement

ಮಾರಿಷಸ್‌ ಮಾಧ್ಯಮ ಪ್ರಕರಣದ ಕುರಿತು ವರದಿ ಮಾಡಿದ್ದು, ಮಾರಿಷಸ್‌ ದೇಶದ ಆ್ಯತ್ಲೀಟ್‌ ಒಬ್ಬರು ರಾಷ್ಟ್ರೀಯ ನಿಯೋಗದ ಸದಸ್ಯನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಬಗ್ಗೆ ಮಾರಿಷಸ್‌ ಆ್ಯತ್ಲೆಟಿಕ್ಸ್‌ ಅಸೋಸಿಯೇಶನ್‌ ತತ್‌ಕ್ಷಣಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದೆ.

“ಕಾಮನ್ವೆಲ್ತ್‌ ಗೇಮ್ಸ್‌ಗಾಗಿ ಬಂದಿರುವ ತಂಡವೊಂದರ ಸದಸ್ಯೆ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ’ ಎಂದು ಕ್ವೀನ್‌ಲ್ಯಾಂಡಿನ ಪೊಲೀಸ್‌ ಆಯುಕ್ತ ಲಾನ್‌ ಸ್ಟೆವರ್ಟ್‌ ತಿಳಿಸಿದ್ದಾರೆ.

ಕಾಮನ್ವೆಲ್ತ್‌ ಗೇಮ್ಸ್‌ ಫೆಡರೇಶನ್‌ಗೂ (ಸಿಜಿಎಫ್) ಘಟನೆಯ ಬಗ್ಗೆ ಅರಿವಿದೆಯಾದರೂ, ಗೇಮ್ಸ್‌ನ ಅದ್ಧೂರಿ ಉದ್ಘಾಟನೆಯ ಗೌಜಿಯಲ್ಲಿ ಈ ಘಟನೆ ಹೆಚ್ಚು ಸುದ್ದಿಯಾಗಿಲ್ಲ ಎಂದೂ ಹೇಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next