Advertisement

ವೃದ್ಧ ದಂಪತಿ ಹತ್ಯೆ ಪ್ರಕರಣದ ಆರೋಪಿ ಕಾಲಿಗೆ ಗುಂಡು

03:57 PM Nov 29, 2017 | Team Udayavani |

 ಬೆಂಗಳೂರು: ಎಚ್‌ಎಎಲ್‌ ಠಾಣೆ ವ್ಯಾಪ್ತಿಯ ಅಶ್ವತ್ಥನಗರದಲ್ಲಿ ಮಂಗಳವಾರ ವೃದ್ಧ ದಂಪತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಆರೋಪಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. 

Advertisement

ಪ್ರಕರಣದ ತನಿಖೆಗಿಳಿದ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಮನೆಯೊಂದರ ಮೇಲೆ ದಾಳಿ ನಡೆಸಿ ಆರೋಪಿ  ಹಸನ್‌ ಪಾಷಾ ನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ, ಆದರೆ ಈ ವೇಳೆ ಪಾಷಾ ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಕೂಡಲೆ  ಸಬ್‌ ಇನ್ಸ್‌ಪೆಕ್ಟರ್‌ ಪ್ರಶೀಲಾ ಅವರು ಆತ್ಮರಕ್ಷಣೆಗಾಗಿ ಪಾಷಾ ಕಾಲಿಗೆ ಗುಂಡು ಹಾರಿಸಿದ್ದಾರೆ. ಪಾಷಾನನ್ನು ವಶಕ್ಕೆ ಪಡೆದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. 

ಹತ್ಯೆಗೀಡಾದ ಗೋವಿಂದನ್‌ ಬಿಇಎಲ್‌ ನಿವೃತ್ತ ನೌಕರರಾಗಿದ್ದು, ಆಸ್ತಿ ವಿಚಾರಕ್ಕೆ ಸಂಬಂಧಿಸಿ ಮೊಮ್ಮಕ್ಕಾಳ ಪ್ರವೀಣ್‌ ಮತ್ತು ಪ್ರಮೋದ್‌ ಸುಪಾರಿ ನೀಡಿದ್ದರು ಎಂದು ವರದಿಯಾಗಿದೆ. 

ಎರಡು ದಿನಗಳ ಹಿಂದೆಯೇ ಕೊಲೆ ನಡೆದಿದ್ದು, ಮೃತ ದೇಹಗಳು ಕೊಳೆತ ಸ್ಥಿತಿಯಲ್ಲಿದ್ದವು. 

Advertisement

Udayavani is now on Telegram. Click here to join our channel and stay updated with the latest news.

Next