Advertisement

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

02:44 AM Sep 22, 2024 | Team Udayavani |

ಮಣಿಪಾಲ: ಪೊಲೀಸ್‌ ಕರ್ತವ್ಯ ಕೂಟಗಳಿಂದ ಜ್ಞಾನವರ್ಧನೆಯ ಜತೆಗೆ ವೃತ್ತಿಪರ ತನಿಖೆಗೆ ಬಹಳಷ್ಟು ಸಹಕಾರಿಯಾಗುತ್ತದೆ. ವೈಜ್ಞಾನಿಕ ದಾಖಲೆಗಳಿಂದ ಹಲವು ಮಂದಿಗೆ ಶಿಕ್ಷೆಯಾದ ಉದಾಹರಣೆಗಳೂ ಇವೆ ಎಂದು ಮಂಗಳೂರು ಪಶ್ಚಿಮ ವಲಯ ಪೊಲೀಸ್‌ ಉಪ ಮಹಾನಿರೀಕ್ಷಕ ಅಮಿತ್‌ ಸಿಂಗ್‌ ಹೇಳಿದರು.

Advertisement

ಕೆಎಂಸಿಯ ಡಾ| ಟಿಎಂಎ ಪೈ ಸಭಾಂಗಣದಲ್ಲಿ ಶನಿವಾರ ಜರಗಿದ ಪಶ್ಚಿಮ ವಲಯ ಮಟ್ಟದ 6ನೇ ಪೊಲೀಸ್‌ ಕರ್ತವ್ಯ ಕೂಟ-2024ರ ಸಮಾರೋಪದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೃತ್ತಿಯಲ್ಲಿ ಹಲವು ಕೌಶಲಗಳನ್ನು ಗಳಿಸಿದರೆ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಿದೆ. ಮುಂದಿನ ಕರ್ತವ್ಯಕೂಟ ಸಹಿತ ರಾಷ್ಟ್ರ ಮಟ್ಟದಲ್ಲಿಯೂ ಮತ್ತಷ್ಟು ಪದಕ ಸಿಗುವಂತಾಗಲಿ ಎಂದರು. ಪ್ರಶಸ್ತಿ ವಿಜೇತರಿಗೆ ನಗದು ಬಹುಮಾನ ಘೋಷಿಸಲಾಯಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ.ಅರುಣ್‌ ಮಾತನಾಡಿ, ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಿದರೆ ತನಿಖೆ ನಡೆಸಲೂ ಸಹಕಾರಿ ಯಾಗಲಿದೆ. ಮುಂದಿನ ಸ್ಪರ್ಧೆಗಳಿಗೆ ಹೊಸ ಅಧಿಕಾರಿಗಳು, ಸಿಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು.

ಮಾಹೆಯ ಸಿಒಒ ಡಾ| ರವಿರಾಜ್‌ ಎನ್‌.ಎಸ್‌. ಮಾತನಾಡಿ, ಪೊಲೀಸರು ಕಾನೂನು ಪಾಲನೆ ಮಾಡುವ ಜತೆಗೆ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ಗಮನ ಹರಿಸಬೇಕು. ಇದರೊಂದಿಗೆ ಇತರರಿಗೆ ಸಹಕಾರ ನೀಡುವ ಮನೋಭಾವವನ್ನೂ ಬೆಳೆಸಿಕೊಳ್ಳಬೇಕು. ಮಣಿಪಾಲದ ಡಾ| ಟಿಎಂಎ ಪೈ ಅವರು ಕೌಶಲಾಭಿವೃದ್ಧಿ ಕೇಂದ್ರ ಆರಂಭಿಸಿದ್ದರು. ಪೊಲೀಸರಿಗೆ ಬೇಕಿರುವ ಕೌಶಲ ತರಬೇತಿಗಳನ್ನು ನೀಡಲು ಮಾಹೆ ಬದ್ಧ ಎಂದರು.

ಮಂಗಳೂರು ವಲಯದ ಅಭಿಯೋಜನ ಇಲಾಖೆಯ ಹಿರಿಯ ಕಾನೂನು ಅಧಿಕಾರಿ ಶಿವಪ್ರಸಾದ್‌ ಆಳ್ವ ಕೆ., ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಪಿ.ಎ.ಹೆಗಡೆ ಉಪಸ್ಥಿತರಿದ್ದರು. ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಎಸ್‌.ಟಿ.ಸಿದ್ದಲಿಂಗಪ್ಪ ಸ್ವಾಗತಿಸಿದರು. ಪಶ್ಚಿಮ ವಲಯ ಎಫ್ಪಿಬಿ ಡಿವೈಎಸ್‌ಪಿ ಗೌರೀಶ್‌ ವಂದಿಸಿದರು. ಪೊಲೀಸ್‌ ಸಿಬಂದಿ ಶಿವಾನಂದ ನಾಯರಿ ನಿರೂಪಿಸಿದರು.

Advertisement

ಉಡುಪಿ ಜಿಲ್ಲಾ ತಂಡಕ್ಕೆ ಸಮಗ್ರ ಪ್ರಶಸ್ತಿ
ಅಪರಾಧ ಕಾನೂನು, ವಿಧಿ ವಿಜ್ಞಾನ ಪರೀಕ್ಷೆ, ಫಾರೆನ್ಸಿಕ್‌ ಫೋಟೋಗ್ರಫಿ, ಬೆರಳಚ್ಚು ಪರೀಕ್ಷೆ, ಹ್ಯಾಂಡ್ಲಿಂಗ್‌, ಲಿಫ್ಟಿಂಗ್‌, ಪ್ಯಾಕಿಂಗ್‌, ಫೋಟೋಗ್ರಫಿ, ವೀಡಿಯೋಗ್ರಫಿ ಸಹಿತ ಹಲವಾರು ರೀತಿಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಶ್ವಾನ ಶೈನಿಗೆ ಅತ್ಯುತ್ತಮ ಶ್ವಾನ ಪ್ರಶಸ್ತಿ ಲಭಿಸಿತು. ಸಂತೋಷ್‌ಗೌಡ ಹಾಗೂ ಗಜಾನನ ಅವರು ಇದರ ತರಬೇತುದಾರರಾಗಿದ್ದಾರೆ. ಇಲಾಖೆಯಲ್ಲಿ ಈ ಶ್ವಾನ 3.6 ವರ್ಷದಿಂದ ಕರ್ತವ್ಯ ನಿರ್ವಹಿಸಿಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next