Advertisement

ತಾಯಿ-ಮಗುವಿದ್ದ ಕಾರು ಎಳೆದೊಯ್ದ ಪೊಲೀಸರು

01:20 PM Nov 12, 2017 | Team Udayavani |

ಮುಂಬಯಿ: ಹಸಿವಿನಿಂದ ಅಳುತ್ತಿದ್ದ ಮಗುವಿಗೆ ಎದೆ ಹಾಲು ಉಣಿಸುತ್ತಿದ್ದ ತಾಯಿ ಕುಳಿತಿದ್ದ ಕಾರನ್ನು ಮುಂಬಯಿ ಪೊಲೀಸರು ಎಳೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗಿದ್ದು ವಿವಾದಕ್ಕೆ ಕಾರಣವಾಗಿದೆ. ವಾಣಿಜ್ಯ ನಗರಿಯ ಪಶ್ಚಿಮ ಮಲಾಡ್‌ನ‌ಲ್ಲಿ ಶುಕ್ರವಾರ ಮಹಿಳೆ ತಮ್ಮ ಏಳು ತಿಂಗಳ ಶಿಶುವಿಗೆ ಕಾರ್‌ನ ಹಿಂದಿನ ಸೀಟ್‌ನಲ್ಲಿ ಕುಳಿತು ಎದೆ ಹಾಲುಣಿಸುತ್ತಿದ್ದರು. ಕೂಡಲೇ ಅಲ್ಲಿಗೆ ಬಂದ ಮುಂಬಯಿ ಸಂಚಾರ ಪೊಲೀಸರ ಟೋಯಿಂಗ್‌ ವಾಹನದ ಸಿಬ್ಬಂದಿ ಕಾರನ್ನು ಎಳೆದುಕೊಂಡು ಹೋಗಲು ಆರಂಭಿಸಿದರು. ಮಹಿಳೆ ಕೂಗಿಕೊಳ್ಳುತ್ತಿದ್ದರೂ ಪೊಲೀಸ್‌ ಸಿಬ್ಬಂದಿ ಕರುಣೆ ತೋರಲೇ ಇಲ್ಲ. 

Advertisement

ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ಕ್ರಮಕ್ಕೆ ವ್ಯಾಪಕ ರೀತಿಯಲ್ಲಿ ಖಂಡನೆ ವ್ಯಕ್ತವಾಗಿದೆ. ಮುಂಬಯಿನ ಸಂಚಾರ ವಿಭಾಗದ ಜಂಟಿ ಆಯುಕ್ತ ಅಮಿತೇಶ್‌ ಕುಮಾರ್‌, ಪ್ರತಿಕ್ರಿಯೆ ನೀಡಿ ಯಾವ ಕಾರಣದಿಂದಾಗಿ ಹೀಗಾಯಿತು ಎಂಬುದರ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ.  ರವಿವಾರ ವರದಿ ಕೈಸೇರಲಿದ್ದು, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next