Advertisement

ಪೆಟ್‌ ಫೆಡ್‌ನ‌ಲ್ಲಿ ಪೊಲೀಸ್‌ ಶ್ವಾನಗಳ ಸಾಹಸ

12:21 AM Nov 18, 2019 | Team Udayavani |

ಬೆಂಗಳೂರು: ನಗರದ ಜಯಮಹಲ್‌ ಪ್ಯಾಲೇಸ್‌ ಆವರಣದಲ್ಲಿ ಆಯೋಜಿಸಿದ್ದ ಎರಡನೇ ಆವೃತ್ತಿಯ ಭಾರತದ ಅತಿದೊಡ್ಡ ಪೆಟ್‌ಫೆಡ್‌ ಉತ್ಸವಕ್ಕೆ ಭಾನುವಾರ ತೆರೆ ಬಿದ್ದಿತು. ಸಾವಿರರು ಪ್ರಾಣಿಪ್ರಿಯರಿಗೆ ಮೋಜು ಮಸ್ತಿ ನೀಡುವ ಜೊತೆಗೆ ಸಾಕುಪ್ರಾಣಿಗಳ ಮಹತ್ವವನ್ನು ತಿಳಿಸುವಲ್ಲಿ ಈ ಉತ್ಸವವು ಯಶ್ವಸಿಯಾಯಿತು.

Advertisement

ಭಾನುವಾರ ಬೆಳಗ್ಗೆ 11 ಗಂಟೆಯಿಂದಲೇ ನೂರಾರು ಶ್ವಾನ ಹಾಗೂ ಬೆಕ್ಕುಗಳನ್ನು ಪೋಷಕರು ಕರೆ ತಂದಿದ್ದರು. ಒಮ್ಮೆಗೆ ನೂರಾರು ಚಂದದ ಶ್ವಾನಗಳೊಟ್ಟಿಗೆ ಮುದ್ದಾದ ಬೆಕ್ಕುಗಳನ್ನು ಕಣ್ತುಂಬಿಕೊಂಡು ಅವುಗಳೊಟ್ಟಿಗೆ ಒಂದಿಷ್ಟು ಸಮಯ ಕಳೆಯಲು ನಗರದ ಪ್ರಾಣಿಪ್ರಿಯರು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದರು.

ಚಿಕ್ಕ ದೊಡ್ಡ ಗಾತ್ರದ ವಿವಿಧ ತಳಿಗಳನ್ನು ಹಿಡಿದ ಶ್ವಾನ ಪೋಷಕರು ಉತ್ಸವವನ್ನು ಒಂದು ಸುತ್ತು ಹಾಕಿ ಆ ಬಳಿಕ ಶ್ವಾನಗಳಿಗೆ ಯೋಜಿಸಿದ್ದ ಕ್ರೀಡೆ, ಫ್ಯಾಷನ್‌ ಶೋನಲ್ಲಿ ಭಾಗವಹಿಸಿದರು. ಮಧ್ಯಾಹ್ನ ಕರ್ನಾಟಕ ಪೊಲೀಸ್‌ ಇಲಾಖೆಯ ಸಹಯೋಗದೊಂದಿಗೆ ನಗರ ಸಶಸ್ತ್ರ ಸೇವಾ ದಳ ಹಾಗೂ ಕರ್ನಾಟಕ ಪೋಲಿಸ್‌ ಶ್ವಾನ ದಳದ ಪ್ರದರ್ಶನ ನಡೆಯಿತು.

ಈ ಪ್ರದರ್ಶನದಲ್ಲಿ ಪೊಲೀಸ್‌ ಶ್ವಾನಗಳು ಅಪರಾಧಿಯನ್ನು ಪತ್ತೆ ಮಾಡುವ ರೀತಿ, ಅವುಗಳ ಓಟ, ಜಿಗಿತ, ಪೋಷಕರೊಟ್ಟಿಗಿನ ಒಡನಾಟ, ವಿವಿಧ ಕಸರತ್ತುಗಳು ನೆರೆದಿದ್ದವರ ಮೈರೋಮಾಂಚವುಂಟು ಮಾಡಿತು. ಪೆಟ್‌ಫೆಡ್‌ನ‌ ಸಂಸ್ಥಾಪಕ ಅಕ್ಷಯ್‌ ಗುಪ್ತಾ, ಬಾಲಿವುಡ್‌ ನಟ ಡಿನೋ ಮೊರೆಯಾ ಭಾಗವಹಿಸಿದ್ದರು.

ಮನೆಯಲ್ಲಿಯೇ ಇದ್ದು ಶ್ವಾನ ಹಾಗೂ ಬೆಕ್ಕುಗಳು ಮಂಕಾಗಿರುತ್ತವೆ. ಇಂತಹ ಉತ್ಸವವು ಅವುಗಳನ್ನು ಚುರುಕಾಗಿಸುತ್ತವೆ. ಮುದ್ದಾಗಿ ಸಾಕಿದ ಪ್ರಾಣಿಯನ್ನು ಪ್ರದರ್ಶಿಸಿ ಎಲ್ಲರಿಂದಲೂ ಪ್ರಶಂಸೆ ಪಡೆದಾಗ ಖುಷಿ ಹೆಚ್ಚಾಗುತ್ತದೆ.
-ವಿಕ್ರಮ್‌, ಬೆಕ್ಕು ಪೋಷಕ

Advertisement
Advertisement

Udayavani is now on Telegram. Click here to join our channel and stay updated with the latest news.

Next