Advertisement

ಪೊಲೀಸ್‌ ಇಲಾಖೆ ಬಲವರ್ಧನೆ: ಆರಗ

07:46 PM Nov 09, 2021 | Team Udayavani |

ಬೆಳ್ತಂಗಡಿ: ನಾಡಿನ ಪವಿತ್ರ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಲಕ್ಷಾನುಗಟ್ಟಲೆ ಭಕ್ತರು ಸಂದರ್ಶಿಸುವುದರಿಂದ ಅಗತ್ಯವಾಗಿ ಪೊಲೀಸ್‌ ಠಾಣೆ ನಿರ್ಮಾಣವಾಗಬೇಕಿತ್ತು. 2.18 ಕೋ.ರೂ. ವೆಚ್ಚದ ಸುಸಜ್ಜಿತ ಕಟ್ಟಡ ರಚನೆಯಾಗಲಿದ್ದು, ಹೆಚ್ಚುವರಿ ವ್ಯವಸ್ಥೆಗಾಗಿ ಪೂರಕ 1 ಕೋ.ರೂ. ಅನುದಾನ ಒದಗಿಸಲಾಗುವುದು, ಈ ಮೂಲಕ ರಾಜ್ಯದ ಪೊಲೀಸ್‌ ಇಲಾಖೆ ಬಲವರ್ಧನೆಗೆ ಅಗತ್ಯ ಯೋಜನೆ ರೂಪಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಆಶ್ವಾಸನೆ ನೀಡಿದರು.

Advertisement

ಕರ್ನಾಟಕ ರಾಜ್ಯ ಪೊಲೀಸ್‌, ದ.ಕ. ಜಿಲ್ಲಾ ಪೊಲೀಸ್‌ ಘಟಕದಿಂದ ಧರ್ಮಸ್ಥಳದಲ್ಲಿ ನಿರ್ಮಾಣಗೊಳ್ಳಲಿರುವ 2.18. ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಪೊಲೀಸ್‌ ಠಾಣೆಯ ನೂತನ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ಶುಭಾಶಂಸನೆ ಮಾಡಿದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು, ಸಮಾಜದಲ್ಲಿ ಅನ್ಯಾಯ ಹಾಗೂ ಅಪರಾಧ ಪ್ರಕರಣಗಳನ್ನು ತಡೆಗಟ್ಟಿ ಶಾಂತಿ, ಸುವ್ಯವಸ್ಥೆ ಹಾಗೂ ಸಾಮಾಜಿಕ ಸಾಮರಸ್ಯ ಕಾಪಾಡಲು ಪೊಲೀಸರು ಉತ್ತಮ ಸೇವೆ ನೀಡುತ್ತಿದ್ದಾರೆ. ಪೊಲೀಸ್‌ ಠಾಣೆ ಭಯವನ್ನು ಹುಟ್ಟಿಸದೆ ರಕ್ಷಣೆ ನೀಡುವ ವಿಶ್ವಾಸ ಮೂಡುವಂತಿರಬೇಕು. ಬದುಕು ಮತ್ತು ಬದುಕಲು ಬಿಡು ಎಂಬ ತಣ್ತೀದ ನೆಲೆಯಲ್ಲಿ ಧರ್ಮರಕ್ಷಣೆಯೊಂದಿಗೆ ಶಾಂತಿ, ಸುಭಿಕ್ಷೆ ಕಾಪಾಡಲು ದಂಡಾಧಿಕಾರಿಗಳಾದ ಪೊಲೀಸರ ಸೇವೆ ಅವಿರತವಾಗಲಿ ಎಂದರು.

ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ಅನುಗ್ರಹ ಹಾಗೂ ಅಣ್ಣಪ್ಪ ಸ್ವಾಮಿಯ ಭಯದಿಂದ ಸತ್ಯ, ಧರ್ಮ, ನ್ಯಾಯ, ನೀತಿ ಸದಾ ಜಾಗೃತವಾಗಿದೆ ಎಂದ ಅವರು ಪೊಲೀಸ್‌ ಠಾಣಾ ಕಟ್ಟಡ ಪೂರ್ಣಗೊಂಡು ಜನಸೇವೆಗೆ ಸಿಗುವಂತಾಗಲಿ ಎಂದು ಹಾರೈಸಿದರು.

ಇದನ್ನೂ ಓದಿ:ಭಾರತೀಯ ಮೂಲದವನ ಮರಣದಂಡನೆಗೆ ತಡೆ ನೀಡಿದ ಸಿಂಗಾಪುರ ನ್ಯಾಯಾಲಯ

Advertisement

ಶಾಸಕ ಹರೀಶ್‌ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿ, ಧರ್ಮಸ್ಥಳ ಪೊಲೀಸ್‌ಠಾಣೆಗೆ ಹೆಚ್ಚುವರಿ 1.30 ಕೋ.ರೂ. ಅನುದಾನ ಹಾಗೂ ಸಿಬಂದಿ ನೇಮಕ ಅವಶ್ಯವಿದೆ. ಧರ್ಮಸ್ಥಳ ಗ್ರಾಮವು ಸುತ್ತಮುತ್ತ 18 ಗ್ರಾಮಗಳಿಗೆ ಕಾರ್ಯವ್ಯಾಪ್ತಿ ವಿಸ್ತರಿಸುವ ಸಲುವಾಗಿ ಇಲ್ಲಿ ವೃತ್ತ ನಿರೀಕ್ಷ ಠಾಣೆಯನ್ನಾಗಿ ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಜತೆಗೆ ವಿಪತ್ತು ನಿರ್ವಹಣೆಗಾಗಿ ಅಗ್ನಿಶಾಮಕ ದಳ ಘಟಕವನ್ನು ಧರ್ಮಸ್ಥಳದಲ್ಲಿ ಪ್ರಾರಂಭಿಸಬೇಕೆಂದ ಅವರು ಪೊಲೀಸರಿಗೆ ಅವಶ್ಯವಿರುವ ವಸತಿ ಸಮುಚ್ಚಯ ನಿರ್ಮಿಸಲು ನೆರವು ನೀಡುವಂತೆ ಮನವಿ ಮಾಡಿದರು.

ಕ.ರಾ.ಪೊ.ವ. ಮುಖ್ಯಅಭಿಯಂತ ಎನ್‌.ಜಿ.ಗೌಡಯ್ಯ, ಧರ್ಮಸ್ಥಳ ಗ್ರಾ.ಪಂ. ಅಧ್ಯಕ್ಷೆ ಜಯಾ ಮೋನಪ್ಪ ಗೌಡ, ಸಹಾಯಕ ಪೊಲೀಸ್‌ಅಧೀಕ್ಷಕ ಶಿವಾಂಶು ರಜಪೂತ್‌ ಉಪಸ್ಥಿತರಿದ್ದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ್‌ ಸ್ವಾಗತಿಸಿದರು. ಬೆಳ್ತಂಗಡಿ ವೃತ್ತ ನಿರೀಕ್ಷಕ ಶಿವಕುಮಾರ್‌ ವಂದಿಸಿದರು.

ಗ್ರಾ.ಯೋಜನೆಯಿಂದ ಏಳಿಗೆ
ಪರಿಸರದಿಂದ ಆರಂಭಿಸಿ ಮನುಷ್ಯನವರೆಗಿ ಸರ್ವತೋಮುಖ ಬೆಳವಣಿಗೆಯಲ್ಲಿ ಒಂದು ಸರಕಾರ ಅನುಸರಿಸಬೇಕಾದ ಯೋಜನೆಗಳನ್ನು ಡಾ| ಹೆಗ್ಗಡೆಯವರ ಅಣತಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಾಕಾರಗೊಂಡಿದೆ. ಜನರಲ್ಲಿ ಆರ್ಥಿಕ ಶಿಸ್ತು, ಸಂಯಮ, ಸೇವಾ ಕಳಕಳಿ, ದಯೆ, ಅನುಕಂಪ, ಸ್ವಾವಲಂಬನೆ ಮೊದಲಾದ ಮಾನವೀಯ ಮೌಲ್ಯಗಳು ಮೂಡಿ ಬಂದಿದ್ದರಿಂದ ಶ್ರೀಸಾಮಾನ್ಯರ ಪರಿವರ್ತನೆಗೆ ನಾಂದಿ ಹಾಡಿದೆ ಎಂದು ಸಚಿವ ಆರಗ ಜ್ಞಾನೇಂದ್ರ ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next