ಜಾಲತಾಣಗಳ ಕೆಲವು ಸೆಲೆಬ್ರಿಟಿಗಳು ಇತ್ತೀಚೆಗೆ ಎಷ್ಟು ಪ್ರಭಾವಿತರಾಗಿದ್ದಾರೆಂದರೇ ಸಾಮಾನ್ಯ ಜನರಷ್ಟೇ ಅಲ್ಲ, ಖುದ್ದು ಪೊಲೀಸರು ಕೂಡ ಅವರ ಮೋಡಿಗೆ ಫಿದಾ ಆಗುವಷ್ಟು!
Advertisement
ಜಾಲತಾಣದಲ್ಲಿ ಮೈಕಲ್ ಜಾಕ್ಸನ್‌ನಂತೆ ಸ್ಟೆಪ್ ಹಾಕಿ ಫೇಮಸ್ ಆಗಿದ್ದ ಡಾನ್ಸರ್ ಬಾಬಾ ಜಾಕ್ಸನ್ ಹಾಗೂ ಆತನ ನೃತ್ಯಕ್ಕೆ ಮನಸೋತ ಪೊಲೀಸ್ ಅಧಿಕಾರಿಯೊಬ್ಬರು ಇದಕ್ಕೆ ನಿದರ್ಶನ. ಮುಂಬಯಿಯ ಪೊಲೀಸ್ ಅಧಿಕಾರಿ ಅಮೋಲ್ ಕಾಂಬ್ಳೆ ಬಾಬಾ ಜಾಕ್ಸನ್‌ನ ಡಾನ್ಸ್‌ಗೆ ಮತಸೋತ ಅಧಿಕಾರಿ, ಇದೀಗ ಬಾಬಾ ಜತೆಗೆ ಅಮೋಲ್ ಕೂಡ ಹಜ್ಜೆಹಾಕಿದ್ದು ಆ ವೀಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. 3 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದ ವೀಡಿಯೋ ನೆಟ್ಟಿಗರ ಮನಗೆದ್ದಿದೆ.