Advertisement

ಪಾಸ್‌ಪೋರ್ಟ್‌ಗೆ ಪೊಲೀಸ್‌ ಅನುಮತಿ: ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ

12:42 PM Sep 27, 2022 | Shreeram Nayak |

ನವದೆಹಲಿ:ಇನ್ನು ಮುಂದೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವವರು ಆನ್‌ಲೈನ್‌ ಅಂಚೆ ಕಚೇರಿ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳಲ್ಲೇ ಪೊಲೀಸ್‌ ಅನುಮತಿ ಪ್ರಮಾಣಪತ್ರ(ಪಿಸಿಸಿ)ಕ್ಕಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೀಗೆಂದು ವಿದೇಶಾಂಗ ಸಚಿವಾಲಯವೇ ಸೋಮವಾರ ಮಾಹಿತಿ ನೀಡಿದೆ.

Advertisement

ಯಾವುದೇ ಅರ್ಜಿದಾರರಿಗೆ ಪಾಸ್‌ಪೋರ್ಟ್‌ ನೀಡಬೇಕೆಂದರೆ ಪೊಲೀಸರ ಅನುಮತಿ ಪ್ರಮಾಣಪತ್ರ ಕಡ್ಡಾಯ. ಕೆಲವೊಮ್ಮೆ ಸ್ಥಳೀಯ ಪೊಲೀಸರು ಪಿಸಿಸಿ ವಿತರಣೆಗೆ ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುವ ಕಾರಣ, ಪಾಸ್‌ಪೋರ್ಟ್‌ ಬರುವುದೂ ತಡವಾಗುತ್ತದೆ.

ಈ ಸಮಸ್ಯೆಯನ್ನು ಪರಿಹರಿಸುವ ಉದ್ದೇಶದಿಂದ, ದೇಶಾದ್ಯಂತ ಇರುವ ಎಲ್ಲ ಆನ್‌ಲೈನ್‌ ಪೋಸ್ಟ್‌ ಆಫೀಸ್‌ ಪಾಸ್‌ಪೋರ್ಟ್‌ ಸೇವಾ ಕೇಂದ್ರಗಳಲ್ಲಿಯೇ ಪಿಸಿಸಿ ಸೇವೆಗಳಿಗೆ ಅರ್ಜಿ ಸಲ್ಲಿಸುವಂಥ ಅವಕಾಶ ಕಲ್ಪಿಸಲಾಗಿದೆ. ಸೆ.28ರಿಂದಲೇ ಇದು ಜಾರಿಯಾಗಲಿದೆ ಎಂದು ಸಚಿವಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next