Advertisement

ಪೊಲೀಸರ ಮೇಲೆ ಹಲ್ಲೆ ಕೇಸ್: ಮಾಜಿ ಶಾಸಕ ವಿ.ಎಸ್.ಪಾಟೀಲ ಪುತ್ರ ಬಂಧನ

03:40 PM Feb 04, 2024 | Team Udayavani |

ಮುಂಡಗೋಡ: 2011 ರಲ್ಲಿ ಮುಂಡಗೋಡ ಪೊಲೀಸ್ ಅಧಿಕಾರಿಗಳ ಮೇಲಿನ ಹಲ್ಲೆಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿನ ವಿಚಾರಣೆಗೆ ಕಳೆದ ಆರು ತಿಂಗಳಿಮದ ಹಾಜರಾಗದ ಹಿನ್ನಲೆಯಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ ಅವರ ಪುತ್ರ ಬಾಪುಗೌಡ ಪಾಟೀಲ ಅವರನ್ನು ಮುಂಡಗೋಡ ಪೊಲೀಸರು ಬಂಧಿಸಿ ಮಾಡಿ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ನ್ಯಾಯಾಲಯವೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ.

Advertisement

2011 ಮಾರ್ಚ್ 3 ರಂದು ಬಾಪುಗೌಡ ಪಾಟೀಲ ಅವರು ಪೊಲೀಸರು ತಮ್ಮ ಮೂಬೈಲ್ ಕರೆ ಸ್ವಿಕಾರ ಮಾಡಿಲ್ಲ ಎಂಬ ಉದ್ದೇಶದಿಂದ ಮುಂಡಗೋಡ ಪೊಲೀಸ್ ಠಾಣೆಯ ಆಗಿನ ಎಎಸ್‌ಐ ಆಗಿದ್ದ ಬಾಲಕೃಷ್ಣ ಪಾಲೇಕರ ಅವರನ್ನು ಮುಂಡಗೋಡ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ನಿಂದಿಸಿ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಜೀವ ಬೇದರಿಕೆ ಹಾಕಿದ್ದಾರೆ ಎಂದು ಬಾಪುಗೌಡ ಸೇರಿ ಹದಿನೈದು ಜನ ಆರೋಪಿಗಳ ಮೇಲೆ ಪ್ರಕರಣ ದಾಖಖಲಾಗಿತ್ತು.

ಆರೋಪಿತರ ಪೈಕಿ ಹದಿನಾಲ್ಕು ಜನರು ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿದ್ದರು ಬಾಪುಗೌಡ ಪಾಟೀಲ ಮಾತ್ರ ಕಳೆದ ಆರು ತಿಂಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ಗೈರು ಆಗಿದ್ದರು. ಇದರಿಂದ ನ್ಯಾಯಾಲಯ ಬಾಪುಗೌಡ ಅವರನ್ನು ನ್ಯಾಯಾಲಯಕ್ಕೆ ಹಾಜರ ಪಡಿಸಲು ವಾರೆಂಟ್ ಜಾರಿ ಮಾಡಿತ್ತು. ಅದರಂತೆ ಪೊಲೀಸರು ಬಾಪುಗೌಡ ಪಾಟೀಲ ಅವರನ್ನು ಬೆಂಗಳೂರನಿಂದ ದಸ್ತಗಿರಿ ಮಾಡಿ ಕರೆ ತಂದು ಶನಿವಾರ ರಾತ್ರಿ ನ್ಯಾಯಾಧೀಶರ ಮನೆಗೆ ಹಾಜರ ಪಡಿಸಿದರು. ನ್ಯಾಯಾಲಯವೂ ಬಾಪುಗೌಡ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next