ಪಣಜಿ: 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪಿಯನ್ನು ಗೋವಾದ ಸಾಲಿಗಾಂವ್ ಪೊಲೀಸರು ಬಂಧಿಸಿದ್ದಾರೆ.
ಸುನಿಲ್ ರಾಥೋಡ್ ಬಂಧಿತ ಆರೋಪಿಯನ್ನು ಕರ್ನಾಟಕ ಮೂಲದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಸಂತ್ರಸ್ತೆಯ ತಾಯಿ ಸಾಲಿಗಾಂವ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಶಂಕಿತನನ್ನು ಕಲಂಗುಟ್‍ನಲ್ಲಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತಂತೆ ಪೋಲಿಸರಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ಸಂತ್ರಸ್ತೆಯ ತಾಯಿ ಕಳೆದ ವಾರ ಸಾಲಿಗಾಂವ್ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿ ವಿರುದ್ಧ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Related Articles
ಅಪರಾಧದ ತನಿಖೆಗಾಗಿ ಪಿಐ ಮಿಲಿಂದ್ ಎಂ.ಭುಯಿಂಬರ್ ಮತ್ತು ವಿಶ್ವೇಶ್ ಕರ್ಪೆ ಅವರ ಮೇಲ್ವಿಚಾರಣೆಯಲ್ಲಿ ಎಎಸ್‍ಐ ಸೂರ್ಯಕಾಂತ್ ಕೋಲ್ವಾಲ್ಕರ್, ಪೊಲೀಸ್ ಪೇದೆ ವಿಶಾಂತ್ ಮಾಯೇಕರ್, ವೈಭವ್ ಅರೋಂಡೆಕರ್, ವಿಜಯ್ ಪಲ್ನಿ ಮತ್ತು ರಾಹುಲ್ ಅಂಗೋಲ್ಕರ್ ಅವರನ್ನು ಒಳಗೊಂಡ ತಂಡ ಗುರುವಾರ ಕರ್ನಾಟಕಕ್ಕೆ ತೆರಳಿತ್ತು.
ಆದರೆ, ಶಂಕಿತ ಆರೋಪಿ ಪೊಲೀಸರನ್ನು ತಪ್ಪಿಸಿ ಗೋವಾಕ್ಕೆ ಬಂದಿದ್ದನು. ಸತತ ಕಾರ್ಯಾಚರಣೆ ಪ್ರಯತ್ನದ ನಂತರ, ಸಲ್ಗಾಂವ್ ಪೊಲೀಸರು ಶಂಕಿತನನ್ನು ಕಲಂಗುಟ್‍ನಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಹೆಚ್ಚಿನ ತನಿಖೆಯನ್ನು ಪಿಐ ಮಿಲಿಂದ್ ಎಂ.ಭುಯಿಂಬರ್ ಅವರ ನೇತೃತ್ವದಲ್ಲಿ ಪಿಎಸ್ ಐ ನಿಲಂ ಗವಾಸ್ ನಡೆಸುತ್ತಿದ್ದಾರೆ.