Advertisement

ಡ್ರಗ್ ಮಾಫಿಯಾ ಪ್ರಕರಣ, ನೇಪಾಳಿ ಪ್ರಜೆಗಳು ಸೇರಿ 31 ಜನರ ಬಂಧನ

09:45 AM Nov 05, 2019 | Team Udayavani |

ಹಿಮಾಚಲ ಪ್ರದೇಶ: ಮಾದಕ ವಸ್ತು ಮಾರಾಟ ಜಾಲವನ್ನು ಭೇದಿಸಿರುವ ಹಿಮಾಚಲ ಪ್ರದೇಶ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 12 ನೇಪಾಳಿ ಪ್ರಜೆಗಳು ಸೇರಿದಂತೆ ಒಟ್ಟು 31 ಜನರನ್ನು ಬಂಧಿಸಿದ್ದಾರೆ.

Advertisement

ಕುಲ್ಲು ಜಿಲ್ಲೆಯ ಪೀನಿ ಮತ್ತು ಜಾನಾ ಪ್ರದೇಶದ ಪಾರ್ವತಿ ಕಣಿವೆಯಲ್ಲಿ ದಾಳಿ ನಡೆಸುವ ಮೂಲಕ ಇವರನ್ನೆಲ್ಲಾ ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಗೌರವ್ ಸಿಂಗ್ ತಿಳಿಸಿದ್ದಾರೆ.

ಸುಮಾರು ಆರು ಗಂಟೆಗಳ ಕಾಲ ಟ್ರಕ್ಕಿಂಗ್ ನಲ್ಲಿ ತೆರಳಿದ್ದ 29 ಮಂದಿ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿತ್ತು. ದಾಳಿಯಲ್ಲಿ ಸುಮಾರು 2ಕೆಜಿ 914 ಗ್ರಾಂ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

ಇದೇ ದಿನ ನಡೆದ ಮತ್ತೊಂದು ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಂದ 914 ಗ್ರಾಂ ಮಾದಕ ದ್ರವ್ಯ ವಶಪಡಿಸಿಕೊಂಡಿರುವುದಾಗಿ ಕುಲ್ಲು ಜಿಲ್ಲಾ ಪೊಲೀಸರು ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next