ನೆಲಮಂಗಲ: ತಾಲೂಕಿನ ಮರಸರಹಳ್ಳಿಯಲ್ಲಿ ಹೊರ ರಾಜ್ಯದ ಯುವಕ ಯುವತಿಯರ ನಡೆಸುತ್ತಿದ್ದ ವೀಕೆಂಡ್ ಪಾರ್ಟಿಗೆ ಪೊಲೀಸರು ದಾಳಿ ನಡೆಸಿ ಗಾಂಜಾ ಹಾಗೂ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ನಗರದಲ್ಲಿ ನೈಟ್‌ಕರ್ಫ್ಯೂ ಜಾರಿಯಾದ ಹಿನ್ನೆಲೆಯಲ್ಲಿ ತಾಲೂಕಿನ ಶ್ರೀನಿವಾಸಪುರ ಗ್ರಾಮಪಂಚಾಯ್ತಿಯ ಮರಸರಹಳ್ಳಿಯಲ್ಲಿ ನಿವೃತ್ತ ಡೀಸಿ ತೋಟದಲ್ಲಿ ಕೇರಳ, ತಮಿಳುನಾಡು ಹಾಗೂಬೆಂಗಳೂರು ಸುತ್ತಮುತ್ತಲಿನ 70ಕ್ಕೂ ಹೆಚ್ಚುಯುವಕ ಯುವತಿಯರು 1 ಸಾವಿರ ರೂ.ನಿಂದ 10 ಸಾವಿರ ರೂ.ವರೆಗೂ ಹಣ ನೀಡಿ ಪಾರ್ಟಿಯಲ್ಲಿ ಭಾಗವಹಿಸಿದ್ದರು.
ದಿಢೀರ್ ದಾಳಿ: ಶನಿವಾರ ಮಧ್ಯಾಹ್ನದಿಂದ ಬೆಂಗಳೂರು, ಹೊರರಾಜ್ಯಗಳಿಂದ ಆಗಮಿಸಿರುವ ಯುವಕ ಯುವತಿಯರು ಸಂಜೆ ವೇಳೆಗೆ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಖಚಿತ ಮಾಹಿತಿಮೇರೆಗೆ ಡಿವೈಎಸ್‌ಪಿ ಜಗದೀಶ್ ಹಾಗೂ ವೃತ್ತನಿರೀಕ್ಷಕ ಹರೀಶ್‌ಕುಮಾರ್, ಸಬ್‌ಇನ್‌ಸ್ಪೆಕ್ಟರ್‌ವಸಂತ್, ಸುರೇಶ್ ನೇತೃತ್ವದಲ್ಲಿ ದಿಢೀರ್ ದಾಳಿಮಾಡಿಸಿದ ಪೊಲೀಸರು ಯುವಕಯುವತಿಯರನ್ನು ವಶಕ್ಕೆ ಪಡೆದು ಪಾರ್ಟಿಗೆ ತಂದಿದ್ದು ಮದ್ಯ ಹಾಗೂ ಗಾಂಜಾ ವಶಕ್ಕೆ ಪಡೆದರು.
ಐಶಾರಾಮಿ ವಾಹನಗಳು: ಪಾರ್ಟಿಗೆ ಬಂದಿದ್ದ ಯುವಕಯುವತಿಯರು ಐಶಾರಾಮಿ ಕಾರುಗಳುಹಾಗೂ ಬೈಕ್‌ಗಳಲ್ಲಿ ಆಗಮಿಸಿದ್ದರು, ಅತಿ ಹೆಚ್ಚುಕಾರು ಬೈಕ್‌ಗಳು ಕೇರಳ, ಹಾಗೂ ತಮಿಳುನಾಡಿನನೊಂದಣಿ ಹೊಂದಿದ್ದ ವಾಹನಗಳಲ್ಲಿ ಆಗಮಿಸಿದ್ದರು.
ಎಸ್ಕೇಫ್: ಪೊಲೀಸರು ದಿಢೀರ್ ದಾಳಿ ನಡೆಸುತ್ತಿದಂತೆ ಪಾರ್ಟಿ ಆಯೋಜನೆ ಮಾಡಿದ್ದ ವ್ಯಕ್ತಿ ನಾಪತ್ತೆ ಆಗಿದ್ದಾನೆ. ಇಂತಹ ಪಾರ್ಟಿಗಳನ್ನು ನಡೆಸಲು ಜಮೀನು ಮಾಲಿಕರು ಅನುಮತಿ ನೀಡಿದ್ದು
ಹೇಗೆ? ಕೋವಿಡ್ ಕಟ್ಟುನಿಟ್ಟಿನ ನಿಯಮದ ನಡುವೆ 70ಕ್ಕೂ ಹೆಚ್ಚು ಹೊರರಾಜ್ಯದ ಯುವಕರು ಸೇರಿದ್ದು ಹೇಗೆ? ಎಂಬ ಅನುಮಾನಗಳುವ್ಯಕ್ತವಾಗಿದ್ದು, ಪೊಲೀಸರ ಪ್ರಭಾವ ಹಾಗೂ ಒತ್ತಡಕ್ಕೆ ಹೊಳಗಾಗದೇ ಸಮಗ್ರ ತನಿಖೆ ನಡೆಯಬೇಕಾಗಿದೆ.