ಚಿಕ್ಕಬಳ್ಳಾಪುರ : ವಿವಾಹಿತ ಮಹಿಳೆಯೊಬ್ಬಳನ್ನು ಅತ್ಯಾಚಾರವೆಸಗಿ ಕೊಲೆ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಜಿಲ್ಲೆಯ ಬಾಗೇಪಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ ನಗರದ ವಿನಾಯಕ ನಗರದ ನಿವಾಸಿ ಬಾಬಾ ಫಕೃದ್ದೀನ್ ಉರುಫ್ ಬಾಷ ಬಂಧಿತ ಆರೋಪಿ ಚಿತ್ತೂರು ಜಿಲ್ಲೆಯ ನಗರೈ ತಾಲೂಕಿನ ವಿಜಯಪುರ ಗ್ರಾಮದ ನಿವಾಸಿ ಖಾಸಿಂ ಬೀ ಕೋಂ ಮುರಾದ್ ಪಾಷ ಕೊಲೆಗೀಡಾದ ನತದೃಷ್ಠ ಮಹಿಳೆ.
ಏನಿದು ಘಟನೆ: ಅಕೋಬರ್ 06 ರಂದು ಬಾಗೇಪಲ್ಲಿ ಪೋಲಿಸ್ ಠಾಣಾ ವ್ಯಾಪ್ತಿಯ ಕಾರಕೂರು ಕ್ರಾಸ್ ಬಳಿಯಿರುವ ಸ್ಯಾನ್‍ಸಿಟಿ ಬಡಾವಣೆಯ ಪ್ರವೇಶ ದ್ವಾರದಲ್ಲಿ ಸುಮಾರು 30-35 ವರ್ಷದ ಮಹಿಳೆಯನ್ನು ಅಪರಿಚಿತರು ಅತ್ಯಾಚಾರವೆಸಗಿ ಕತ್ತುಹಿಸುಕಿ ಕೊಲೆ ಮಾಡಿ ಪರಾರಿಯಾಗಿದರು.
ಇದನ್ನೂ ಓದಿ:ಸಮಸ್ಯೆಗಳನ್ನು ಜೀವಂತವಾಗಿಟ್ಟು ರಾಜಕೀಯ ಮಾಡುವುದೇ ಕಾಂಗ್ರೆಸ್- ಜೆಡಿಎಸ್ ಚಾಳಿ: ಡಿಸಿಎಂ
ಈ ಸಂಬಂಧ ದೂರು ದಾಖಲಿಸಿಕೊಂಡ ಬಾಪೇಪಲ್ಲಿ ಪೋಲಿಸರು ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ಹಾಗೂ ಡಿವೈಎಸ್ಪಿ ಕೆ.ರವಿಶಂಕರ್ ಅವರ ಮಾರ್ಗದರ್ಶದಲ್ಲಿ ಬಾಗೇಪಲ್ಲಿ ಸಿಪಿಐ ನಯಾಝ್ ಬೇಗ್ ಅವರ ನೇತೃತ್ವದಲ್ಲಿ ಪಿಎಸ್‍ಐ ಜಿ.ಕೆ.ಸುನೀಲ್ ಮತ್ತು ಸಿಬ್ಬಂದಿ ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿತ್ತು ಈ ತಂಡ ತನಿಖೆ ಕೈಗೊಂಡು ಮೊದಲು ಕೊಲೆಗೀಡಾದ ಮಹಿಳೆಯ ವಿಳಾಸವನ್ನು ಪತ್ತೆ ಹಚ್ಚಿ ಬಳಿಕ ಗ್ರಾಮಸ್ಥರು ನೀಡಿದ ಸುಳಿವಿನ ಮೇರೆಗೆ ಬಾಬಾ ಫಕೃದ್ದೀನ್ ಉರುಫ್ ಬಾಷ ಎಂಬಾತನನ್ನು ನಗರೈ ತಾಲೂಕಿನ ವಿಜಯಪುರ ಗ್ರಾಮದಲ್ಲಿ ವಶಕ್ಕೆ ಪಡೆದು ವಿಚಾರಣೆಗೆ ಒಳಡಿಸಿದಾಗ ಆರೋಪಿ ಕೊಲೆಗೀಡಾದ ಮಹಿಳೆ ತನ್ನ ಪತಿಯೊಂದಿಗೆ ಸಂಬಂಧ ತೈಜಿಸಿದ್ದರಿಂದ ಈಕೆಯನ್ನು ಫುಸಲಾಯಿಸಿ ಅತ್ಯಾಚಾರವೆಸಗಿದ್ದು ಈ ವಿಚಾರವನ್ನು ಗ್ರಾಮಸ್ಥರಿಗೆ ಆಕೆ ಎಲ್ಲಿ ಬಹಿರಂಗಪಡಿಸುತ್ತಾಳೆ ಎಂಬ ಭಯದಿಂದ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
ಇದನ್ನೂ ಓದಿ:ಚಾಲಕರಿಗೆ ಕಷ್ಟಕಾಲದಲ್ಲಿ ಪರಿಹಾರ ಕೊಡುವ ಬದಲು ದಂಡ ವಸೂಲಿ ಖಂಡನೀಯ : ಕುಮಾರಸ್ವಾಮಿ ಕಿಡಿ
ಯಾವುದೇ ರೀತಿಯ ಸುಳಿವು ಇಲ್ಲದೆ ಕೊಲೆ ಪ್ರಕರಣವನ್ನು ಕೇವಲ 12 ದಿನಗಳಲ್ಲಿ ಭೇದಿಸಿದ ಜಿಲ್ಲೆಯ ಬಾಗೇಪಲ್ಲಿ ಸಿಪಿಐ ನಯಾಝ್ ಬೇಗ್,ಪಿಎಸ್‍ಐ ಜಿ.ಕೆ.ಸುನೀಲ್,ಸಿಬ್ಬಂದಿಗಳಾದ ಮುಖ್ಯಪೇದೆ ನಟರಾಜ್,ಶ್ರೀನಾಥ್,ಪೇದೆಗಳಾದ ಮೋಹನ್‍ಕುಮಾರ್,ಶ್ರೀಪತಿ ಹಾಗೂ ಧನುಂಜಯ ಅವರನ್ನು ಒಳಗೊಂಡ ತನಿಖಾ ತಂಡದ ಕಾರ್ಯವೈಖರಿಯನ್ನು ಜಿಲ್ಲಾ ಎಸ್ಪಿ ಮಿಥುನ್ ಕುಮಾರ್ ಶ್ಲಾಘಸಿ ತನಿಖಾ ತಂಡಕ್ಕೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.