ಜಮ್ಮು: ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರ ಹೆಸರಿನಲ್ಲಿ ನಕಲಿ ವಾಟ್ಸ್‌ಆಪ್ ಅಕೌಂಟ್ ಸೃಷ್ಟಿಸಿದ ಆರೋಪದ ಮೇಲೆ ಭಾರತೀಯ ಮೂಲದ ಇಟಲಿ ಪ್ರಜೆಯನ್ನು ಬಂಧಿಸಲಾಗಿದೆ. ಆರೋಪಿಯನ್ನು ಗಗನ್‌ದೀಪ್ ಸಿಂಗ್ ಎಂದು ಗುರುತಿಸಲಾಗಿದೆ.
22 ವರ್ಷದ ಗಗನ್‌ದೀಪ್ ಸಿಂಗ್ ತನ್ನ ಕುಟುಂಬದ ಜೊತೆ 2007ರಿಂದ ಇಟಲಿಯಲ್ಲಿ ವಾಸಿಸುತ್ತಿದ್ದ. ಈತ ಭಾರತದ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಅವರ ಹೆಸರಿನಲ್ಲಿ ನಕಲಿ ವಾಟ್ಸ್‌ಆಪ್ ಅಕೌಂಟ್ ಸೃಷ್ಟಿಸಿ ಅವರ ಫೋಟೋವನ್ನೂ ಹಾಕಿ ಜನರನ್ನು,ಅಧಿಕಾರಿಗಳನ್ನು ಮೋಸಗೊಳಿಸುತ್ತಿದ್ದ ಆರೋಪದ ಮೇಲೆ ಪೋಲಿಸರು ಬಂಧಿಸಿದ್ದಾರೆ.
ಈತ ಯೂಟ್ಯೂಬ್ ವಿಡಿಯೋಗಳನ್ನು ನೋಡಿಕೊಂಡು ಈ ಕೃತ್ಯಕ್ಕೆ ಇಳಿದಿದ್ದ ಎಂದು ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.
ಆತನಿಗೆ ಸಹಕರಿಸಿದ ಆರೋಪದ ಮೇಲೆ ಆತನ ಸ್ನೇಹಿತ 29 ವರ್ಷದ ಅಶ್ವನಿ ಕುಮಾರ್‌ನನ್ನೂ ಬಂಧಿಸಲಾಗಿದೆ. ಈತ ಗಗನ್‌ದೀಪ್‌ಗೆ ಒಟಿಪಿಗಳನ್ನು ನೀಡಿ ನಕಲಿ ವಾಟ್ಸ್‌ಆಪ್ ಅಕೌಂಟ್ ಸೃಷ್ಟಿಸುವುದಕ್ಕೆ ಸಹಾಯ ಮಾಡುತ್ತಿದ್ದ.
Related Articles
ಆರೋಪಿ ಗಗನ್‌ದೀಪ್ ಇಂಟರ್ನೆಟ್ ಮೂಲಕ ಸರ್ಕಾರದ ಉನ್ನತ ಅಧಿಕಾರಿಗಳ ಮಾಹಿತಿ ಕಲೆ ಹಾಕಿದ್ದ. ಈ ನಕಲಿ ವಾಟ್ಸ್‌ಆಪ್ ಅಕೌಂಟ್‌ನಿಂದ ಆತ ಉನ್ನತ ಅಧಿಕಾರಿಗಳನ್ನು ಸಂಪರ್ಕಿಸಿದ್ದ ಎಂದು ಡಿಸಿಪಿ ಪ್ರಶಾಂತ್ ಗೌತಮ್ ಹೇಳಿದ್ದಾರೆ.