ಬುಲಾಂದ್‌ಶಹರ್: ಹದಿನೈದು ದಿನಗಳ ಹಿಂದೆ ತನ್ನ ಹೆತ್ತವರನ್ನೇ ಕೊಂದಿದ್ದ 15ರ ಹರೆಯದ ಬಾಲಕಿಯನ್ನು ಉತ್ತರ ಪ್ರದೇಶದ ಬುಲಾಂದ್‌ಶಹರ್ ಪೋಲಿಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಬಾಲಕಿ ತನ್ನ ಹೆತ್ತವರನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ಧಾಳೆ.
ʻತಾನು ತನ್ನ ಮನೆಯ ಭಯದ ವಾತಾವರಣವನ್ನು ದ್ವೇಷಿಸುತ್ತಿದ್ದೆ ಮತ್ತು ನನ್ನ ಹೆತ್ತವರ ಹಿಂಸಾ ಮನೋಭಾವವದಿಂದ ಬೇಸತ್ತಿದ್ದೆʼ ಎಂದು ಬಾಲಕಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ.
ʻತನ್ನ ತಾಯಿ ತನಗೆ ವಿಪರೀತವಾಗಿ ಹೊಡೆಯುತ್ತಿದ್ದಳು. ಅಲ್ಲದೆ ಅವಳು ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧವನ್ನು ಹೊಂದಿದ್ದಳುʼ ಎಂದು ಆಕೆ ಹೇಳಿದ್ದಾಳೆ.
Related Articles
ಮಾ.15ರಂದು ದಂಪತಿಗಳಿಬ್ಬರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಪ್ರಕರಣವನ್ನು ಬೆನ್ನತ್ತಿದ್ದ ಪೋಲಿಸರಿಗೆ ಸಿಕ್ಕ ಈ ಮಾಹಿತಿ ಸದ್ಯ ಬೆಚ್ಚಿಬೀಳಿಸುವಂತಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಬುಲಾಂದ್‌ಶಹರ್ ಪೋಲಿಸ್ ಅಧಿಕಾರಿ ಶ್ಲೋಕ್ ಕುಮಾರ್, ʻತನ್ನ ಹೆತ್ತವರನ್ನು ತಾನೇ ಹತ್ಯೆ ಮಾಡಿರುವುದಾಗಿ ಬಾಲಕಿ ಒಪ್ಪಿಕೊಂಡಿದ್ದಾಳೆ. ಅವಳು ತನ್ನ ಹೆತ್ತವರಿಗೆ ನಿದ್ರೆ ಬರುವ ಮಾತ್ರೆಯನ್ನು ಊಟದಲ್ಲಿ ಬೆರೆಸಿಕೊಟ್ಟು ಆ ಬಳಿಕ ಕೊಡಲಿಯಿಂದ ಹೊಡೆದು ಅವರನ್ನು ಹತ್ಯೆ ಮಾಡಿದ್ಧಾಗಿ ತಿಳಿಸಿದ್ದಾಳೆʼ ಎಂಬ ಮಾಹಿತಿಯನ್ನು ನೀಡಿದ್ದಾಳೆ ಎಂದು ಹೇಳಿದ್ದಾರೆ.
ಈಕೆಯ ಜೊತೆಗೆ ಈಕೆಗೆ ನಿದ್ದೆ ಮಾತ್ರೆಗಳನ್ನು ನೀಡಿ ಸಹಾಯ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಯುವಕನೊಬ್ಬನನ್ನು ಮತ್ತು ಮೆಡಿಕಲ್ ಶಾಪ್ ಮಾಲೀಕನನ್ನು ಬಂಧಿಸಿರುವುದಾಗಿ ಪೋಲಿಸರು ಹೇಳಿದ್ದಾರೆ.
ಇದನ್ನೂ ಓದಿ: ಬಳ್ಳಾರಿ: ತವರು ಮನೆ ಸೇರಿದ್ದ ಪತ್ನಿಯ ಕೊಲೆಗೆ ಯತ್ನಿಸಿದ ಕುಡುಕ ಗಂಡ
ʻಇದು ಅತ್ಯಂತ ಕಠಿಣ ಪ್ರಕರಣವಾಗಿತ್ತು. ಈ ಪ್ರಕರಣವನ್ನು ಬೆನ್ನತ್ತುವ ವೇಳೆ ನಾವು ಹಲವು ಮಂದಿಯನ್ನು ವಿಚಾರಣೆಗೊಳಪಡಿಸಿದ್ದೆವು. ಆದರೆ ಬಾಲಕಿಯ ಮೊಬೈಲ್ ಟ್ರೇಸ್ ಮಾಡಿದ ವೇಳೆ ಆಕೆ ವ್ಯಕ್ತಿಯೊಬ್ಬನೊಂದಿಗೆ ಮಾತುಕತೆ ನಡೆಸಿದ್ದರ ಆಧಾರದ ಮೇಲೆ ಆಕೆಯ ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಿದ್ದಿದೆʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.