ಹೊಸಕೋಟೆ: ತಾಲೂಕಿನಲ್ಲಿ ಅರಾಜಕತೆ ಸೃಷ್ಟಿಯಾಗಲು ಪೊಲೀಸರೆ ನೇರ ಹೊಣೆಗಾರ ರಾಗಿದ್ದಾರೆ ಎಂದು ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಆರೋಪಿಸಿದರು. ನಗರದ ಪ್ರವಾಸಿ ಮಂದಿರ ವೃತ್ತದಲ್ಲಿ ಪೊಲೀಸ್ ದೌರ್ಜನ್ಯ ಖಂಡಿಸಿ ಬಿಜೆಪಿ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಕಾನೂನು, ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರು ಸಂಪೂರ್ಣ ವಿಫಲರಾಗಿದ್ದು, ಸಚಿವರ ಕಪಿಮುಷ್ಠಿಯಲ್ಲಿ ಒಂದು ಪಕ್ಷದ ಏಜೆಂಟರಂತೆ ಪೊಲೀಸರು ಕಾರ್ಯನಿರ್ವಹಿ ಸುತ್ತಿದ್ದಾರೆ. ಬಿಜೆಪಿ ಮುಖಂಡರು, ಕಾರ್ಯ ಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಕಿರುಕುಳ ನೀಡಿ, ಕಾನೂನು ಉಲ್ಲಂಘಿಸಿ ದುಂಡಾವರ್ತನೆ ಮೆರೆಯುತ್ತಿದ್ದಾರೆಂದರು.
ಸಚಿವರ ಕುಮ್ಮಕ್ಕು: ಪೊಲೀಸ್ ಠಾಣೆಗಳು ಕಾಂಗ್ರೆಸ್ ಕಚೇರಿಗಳಾಗಿ ಪರಿವರ್ತನೆಯಾಗಿ ದ್ದು, ಜನಸಾಮಾನ್ಯರಿಗೆ ನ್ಯಾಯ ಸಿಗುತ್ತಿಲ್ಲ. ಸಚಿವರ ಕುಮ್ಮಕ್ಕಿನಿಂದ ಸಂಬಂಧವಿಲ್ಲದಿದ್ದರೂ ಗೂಂಡಾ ಕೇಸ್ ದಾಖಲಿಸಲಾಗುತ್ತಿದೆ. ನಗರ ದಲ್ಲಿ ಅಕ್ರಮ ಜೂಜು, ಕಾನೂನು ಬಾಹಿರ ವಾಗಿ ಗ್ಯಾಸ್, ಮಾದಕ ಪದಾರ್ಥಗಳ ಮಾರಾ ಟ ರಾಜಾರೋಷವಾಗಿ ನಡೆಯುತ್ತಿದ್ದು, ಪೊಲೀ ಸರಿಗೆ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆಂದರು.
ಇನ್‌ಸ್ಪೆಕ್ಟರ್ ಅಮಾನತು ಮಾಡಿ: ತಾಲೂಕು ಕಚೇರಿ, ನಗರಸಭೆಯಲ್ಲಿ ದುರಾಡಳಿತ, ಭ್ರಷ್ಟಾ ಚಾರ, ಪಕ್ಷಪಾತ ಧೋರಣೆ, ಮಧ್ಯವರ್ತಿ ಗಳ ಹಾವಳಿ ತಾಂಡವವಾಡುತ್ತಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇತ್ತೀ ಚೆಗೆ ತಾಲೂಕಿನ ಕೋಡಿಹಳ್ಳಿಯಲ್ಲಿ ಪೊಲೀ ಸರೇ ಸ್ವತಃ ಗಲಭೆ ಸೃಷ್ಟಿಸಿ ಸ್ಥಳದಲ್ಲಿ ಇಲ್ಲದ ಪಕ್ಷದ ಮುಖಂಡರಾದ ಸುರೇಶ್ ಹಾಗೂ ಸುನಿಲ್ ಅವರ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.
ಪ್ರತಿ ದೂರು ಪಡೆಯಲು ಕಾಲ ಹರಣ ಮಾಡಿರುವುದೇ ಸಚಿವರ ಕೈಗೊಂಬೆ ಗಳಾಗಿರುವುದಕ್ಕೆ ಸ್ಪಷ್ಟ ನಿದರ್ಶನ ವಾಗಿದೆ. 15 ದಿನಗಳ ಹಿಂದೆಯೇ ವರ್ಗಾವಣೆಗೊಂಡಿ ದ್ದ ರೂ ಸ್ವಹಿತಾಸಕ್ತಿಯಿಂದ ಸುಳ್ಳು ದೂರು ದಾಖ ಲಿಸಿಕೊಂಡು ಕರ್ತವ್ಯಲೋಪ ಎಸಗಿರುವ ಸಬ್ ಇನ್‌ಸ್ಪೆಕ್ಟರ್‌ರನ‌್ನು ಅಮಾನತು ಮಾಡಬೇ ಕೆಂದು ಒತ್ತಾಯಿಸಿದರು.
ಶಾಸಕ ಆಶ್ವತ್ಥನಾರಾಯಣ ಮಾತನಾಡಿ, ಕಾನೂನು ಬಾಹಿರವಾಗಿ ದೂರು ದಾಖಲಿಸು ತ್ತಿರುವ ಬಗ್ಗೆ ಉನ್ನತಾಧಿಕಾರಿಗಳಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳ ಬೇಕು. ತಾಲೂಕಿನಲ್ಲಿ ಪೊಲೀಸರ ದೌರ್ಜನ್ಯ ಗಳ ವಿರುದ್ಧ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ಸಲ್ಲಿಸಲಾಗುವುದೆಂದರು. ತಾಲೂಕು ಬಿಜೆಪಿ ಅಧ್ಯಕ್ಷ ಸಿ.ಮಂಜುನಾಥ್, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶರತ್ ಬಚ್ಚೇ ಗೌಡ ಮಾತನಾಡಿದರು. ಬಿಜೆಪಿ ಕಚೇರಿಯಿಂದ ಮಿನಿ ವಿಧಾನಸೌಧದವರೆಗೂ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್‌ರಿಗೆ ಮನವಿ ಸಲ್ಲಿಸಿದರು.