Advertisement

ಪೊಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ, ಇಬ್ಬರು ನಾಗರಿಕರ ಸಾವು

08:15 AM Nov 16, 2022 | Team Udayavani |

ಕೀವ್ : ಮಂಗಳವಾರ, ರಷ್ಯಾ ಮತ್ತೆ ಉಕ್ರೇನ್‌ನ ಕೈವ್, ಲಿವ್, ಖಾರ್ಕಿವ್, ಪೋಲ್ಟವಾ, ಒಡೆಸ್ಸಾ ಸೇರಿದಂತೆ ಹಲವಾರು ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ. ಈ ನಡುವೆ ಉಕ್ರೇನ್ ಗಡಿಯಲ್ಲಿರುವ ನ್ಯಾಟೋ ಸದಸ್ಯ ರಾಷ್ಟ್ರವಾದ ಪೋಲೆಂಡ್‌ ಮೇಲೆ ರಷ್ಯಾ ನಿರ್ಮಿತ ಕ್ಷಿಪಣಿ ಬಿದ್ದಿದ್ದು, ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ.

Advertisement

ಪೋಲೆಂಡ್‌ ಮೇಲೆ ದಾಳಿ ನಡೆಸಿರುವ ಕ್ಷಿಪಣಿ ದಾಳಿಯನ್ನು ರಷ್ಯಾ ಸಂಪೂರ್ಣವಾಗಿ ನಿರಾಕರಿಸಿದೆ. ಆದರೆ ನ್ಯಾಟೋ ಈ ಬಗ್ಗೆ ತುರ್ತು ಸಭೆ ಕರೆದಿದ್ದು, ರಷ್ಯಾದ ರಾಯಭಾರಿಯನ್ನು ಸಭೆಗೆ ಕರೆಸಿದೆ. ಒಂದು ವೇಳೆ ರಷ್ಯಾದ ಕ್ಷಿಪಣಿ ದಾಳಿ ನಿಜವೆಂದು ಸಾಬೀತಾದರೆ, ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವು ವಿಭಿನ್ನ ತಿರುವು ಪಡೆಯಬಹುದು ಎಂದು ಹೇಳಲಾಗುತ್ತಿದೆ.

ದಾಳಿಗೆ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯದ ವಕ್ತಾರ ಲುಕಾಸ್ಜ್ ಜಸಿನಾ ಅವರು ಘಟನೆಯ ಕುರಿತು “ತುರ್ತಾಗಿ ವಿವರವಾದ ವಿವರಣೆಗಳನ್ನು ಒದಗಿಸುವಂತೆ” ರಷ್ಯಾಕ್ಕೆ ಕರೆ ನೀಡಿದ್ದಾರೆ.

ರಷ್ಯಾ ಉಕ್ರೇನ್‌ನಲ್ಲಿ ಭಾರಿ ಗುಂಡಿನ ದಾಳಿ ನಡೆಸಿತು
ಈ ನಡುವೆ ಉಕ್ರೇನ್ ರಾಜಧಾನಿ ಕೀವ್ ನಗರ ಸೇರಿದಂತೆ ಉಕ್ರೇನ್​ನ ವಿವಿಧೆಡೆ ರಷ್ಯಾ ಕ್ಷಿಪಣಿ ದಾಳಿ ಮುಂದುವರಿಸಿದ್ದು, ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಅಸ್ತವ್ಯಸ್ತಗೊಂಡಿದ್ದು ಇಡೀ ದೇಶ ಕಗ್ಗತ್ತಲಲ್ಲಿ ಮುಳುಗುವಂತೆ ಮಾಡಿತ್ತು.

ಇದನ್ನೂ ಓದಿ : ಹೈದರಾಬಾದ್‌ನಿಂದ ಹೊರಬಿದ್ದ ಕೇನ್‌ ವಿಲಿಯಮ್ಸನ್‌, ಪೂರಣ್‌

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next