ಪುಣೆ: ತುಳುನಾಡಿನ ಶ್ರೀ ರಾಜರಾಜೇಶ್ವರಿ ದೇವಸ್ಥಾನ ಪೊಳಲಿ ಕ್ಷೇತ್ರದ, ಶ್ರೀ ದುರ್ಗಾಪರಮೇಶ್ವರಿ, ಶ್ರೀ ರಾಜರಾಜೇಶ್ವರಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ಭದ್ರಕಾಳಿ ಹಾಗೂ ಪರಿವಾರ ದೇವರ ಸಾನಿಧ್ಯಗಳ ಗರ್ಭಗುಡಿ ಮತ್ತು ದೇವಸ್ಥಾನ ಪುನಃನಿರ್ಮಾಣಗೊಂಡು ಮಾ. 4 ರಿಂದ ಮೊದಲ್ಗೊಂಡು ಮಾ. 13ರವರೆಗೆ ಪುನಃಪ್ರತಿಷ್ಠೆ, ಅಷ್ಟಬಂಧ, ನೂತನ ಧ್ವಜ ಸ್ತಂಭ ಪ್ರತಿಷ್ಠಾ ಬ್ರಹ್ಮ ಕಲಶಾಭಿಷೇಕ ಮಹೋತ್ಸವವು ಜರಗಲಿದೆ.
ಶ್ರೀ ಕ್ಷೇತ್ರ ಪೊಳಲಿಯ ಜೀರ್ಣೋದ್ಧಾರ ಕಾರ್ಯದಲ್ಲಿ ಪುಣೆಯ ಭಕ್ತಾಭಿಮಾನಿಗಳು ಕೂಡಾ ತಮ್ಮ ದೇಣಿಗೆಯನ್ನು ನೀಡಿ ಕೈಜೋಡಿಸಿದ್ದು, ಪೊಳಲಿ ಜೀರ್ಣೋದ್ಧಾರ ಸಮಿತಿ ಪುಣೆ ಇದರ ವತಿಯಿಂದ ಬ್ರಹ್ಮ ಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಫೆ. 21 ರಂದು ಸ್ವಾರ್‌ಗೆàಟ್‌ನ ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್ ಇದರ ಎ. ಆರ್. ಭಟ್ ಸಭಾಗೃಹದಲ್ಲಿ ಜರಗಿತು.
ಪುಣೆಯ ಉದ್ಯಮಿ, ಶ್ರೀ ಗುರುದೇವ ಸೇವಾ ಬಳಗ ಪುಣೆ ಇದರ ಅಧ್ಯಕ್ಷರಾದ ಸದಾನಂದ ಕೆ. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ಜೀರ್ಣೋದ್ಧಾರ ಸಮಿತಿ ಪುಣೆ ಇದರ ಉಪಾಧ್ಯಕ್ಷರುಗಳಾದ ಮಾಧವ ಶೆಟ್ಟಿ, ಆಶೀರ್ವಾದ್, ನಾರಾಯಣ ಶೆಟ್ಟಿ ಸಾಯಿ ಫ್ಯಾಶನ್, ಪಣಪಿಲ ಶೇಖರ್ ಪೂಜಾರಿ ಅಂಬಿಕಾ, ಕಾರ್ಯದರ್ಶಿ ನಗ್ರಿ ರೋಹಿತ್ ಡಿ. ಶೆಟ್ಟಿ, ಕೋಶಾಧಿಕಾರಿ ಹರೀಶ್ ಮೂಡಬಿದ್ರಿ, ಸಲಹೆಗಾರರಾದ ಪುಣೆ ತುಳುಕೂಟದ ಅಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ಜೊತೆ ಕಾರ್ಯದರ್ಶಿ ನವೀನ್ ಬಂಟ್ವಾಳ್, ಸದಸ್ಯರಾದ ಜಗದೀಶ್ ಹೆಗ್ಡೆ, ಉಮೇಶ್ ಶೆಟ್ಟಿ ನಿಂಜೂರು, ಪ್ರೇಮ ಎಸ್. ಶೆಟ್ಟಿ, ವೀಣಾ ಪಿ. ಶೆಟ್ಟಿ, ಪುಷ್ಪ ಎಲ್. ಪೂಜಾರಿ, ವೀಣಾ ಡಿ. ಶೆಟ್ಟಿ, ಸುಮನಾ ಎಸ್. ಹೆಗ್ಡೆ, ರಜನಿ ಹೆಗ್ಡೆ ಮೊದಲಾದವರು ಆಮಂತ್ರಣ ಪತ್ರಿಕೆಯನ್ನು ಬಿಡಿಗಡೆಗೊಳಿಸಿದರು.
ಸದಾನಂದ ಶೆಟ್ಟಿ ಅವರು ಮಾತನಾಡಿ, ನಮ್ಮ ತುಳುನಾಡಿನ ಪುರಾತನ ಕಾರ್ಣಿಕದ ಕ್ಷೇತ್ರವಾದ ಪೊಳಲಿ ಶ್ರೀ ದುರ್ಗಾಪರಮೇಶ್ವರಿ, ಶ್ರೀ ರಾಜರಾಜೇಶ್ವರಿ ಅಮ್ಮನವರ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯದಲ್ಲಿ ನಾವು ಪುಣೆಯಲ್ಲಿರುವ ಭಕ್ತರು ಸೇರಿ ನಮ್ಮಿಂದಾಗುವ ಸೇವಯನ್ನು ನೀಡಿದ್ದೇವೆ. ಇದೀಗ ಕ್ಷೇತ್ರದ ಬ್ರಹ್ಮ ಕಲಶೋತ್ಸವದ ಸಡಗರ ಮಾರ್ಚ್‌ನಲ್ಲಿ ನಡೆಯಲಿದೆ. ನಾವೆಲ್ಲರೂ ಅದರಲ್ಲಿ ಪಾಲ್ಗೊಂಡು ಅಮ್ಮನವರ ಕೃಪೆಗೆ ಪಾತ್ರರಾಗೋಣ ಎಂದರು.
ಕಾರ್ಯದರ್ಶಿ ರೋಹಿತ್ ಶೆಟ್ಟಿ ಅವರು ಮಾತನಾಡಿ, ಪೊಳಲಿ ಕ್ಷೇತ್ರದ ಜೀರ್ಣೋದ್ಧಾರದ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ಪುಣೆಯಲ್ಲಿಯು ಸಮಿತಿಯನ್ನು ರಚಿಸಿ ಮೂಲಕ ಅಮ್ಮನ ಸೇವೆಯನ್ನು ಮಾಡುವ ಭಾಗ್ಯ ನಮಗೆಲ್ಲ ಸಿಕ್ಕಿದೆ. ಅದರ ಸಭೆಯನ್ನು ನಾವು ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಮುಖಂಡರನ್ನು ಕರೆಸಿ ಇಲ್ಲಿ ಮಾಡಿದ್ದೇವು. ಪುಣೆಯ ಭಕ್ತರು ಸಹಕರಿಸಿ¨ªಾರೆ. ಅಮ್ಮನ ಸೇವೆಗೆ ಪುಣೆಯಲ್ಲಿ ಮಹನೀಯರು ದೇಣಿಗೆಯನ್ನು ನೀಡಿ¨ªಾರೆ. ಇನ್ನೂ ಕೂಡಾ ನೀಡುವವರಿದ್ದಾರೆ. ಅಂತೆಯೇ ಇದೀಗ ಪೊಳಲಿ ಕ್ಷೇತ್ರದ ಪುನಃಪ್ರತಿಷ್ಠೆ ಬ್ರಹ್ಮ ಕಲಶೋತ್ಸವ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದ್ದೇವೆ. ಮಾ. 4 ರಿಂದ ಮಾ. 13ರ ವರೆಗೆ ನಡೆಯಲಿರುವ ಈ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಭಾಗಿಗಳಾಗಿ ಅಮ್ಮನ ಕೃಪೆಗೆ ಪಾತ್ರರಾಗಬೇಕು ಎಂದು ನುಡಿದು, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಚಿತ್ರ-ವರದಿ: ಹರೀಶ್ ಮೂಡಬಿದ್ರಿ ಪುಣೆ