Advertisement

ಬಿಎಸ್‌ವೈ ರಾಜಕಾರಣಕ್ಕೆ ಅಂಟಿದ ವಿಷ: ಕಾಗೋಡು

06:15 AM Oct 21, 2018 | |

ತೀರ್ಥಹಳ್ಳಿ: ಈ ಉಪ ಚುನಾವಣೆ ಯಾರಿಗೂ ಬೇಡವಾಗಿತ್ತು. ಆದರೆ, ಬಿಜೆಪಿಯ ಅಪ್ಪ-ಮಗನಿಂದಾಗಿ ಈ ಚುನಾವಣೆ ಬರುವಂತಾಗಿದೆ. ರಾಜಕಾರಣಕ್ಕೆ ವಿಷವಾಗಿರುವ ಈ ಅಪ್ಪ-ಮಗನಿಗೆ ಈ ಬಾರಿ ಸರಿಯಾದ ಪಾಠ ಕಲಿಸಬೇಕಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. 

Advertisement

ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಹಾಗೂ ಬಿ.ವೈ.ರಾಘವೇಂದ್ರ ವಿರುದ್ಧ ಕಿಡಿಕಾರಿದರು. ಮತದಾರ ಈ ಪ್ರಜಾಪ್ರಭುತ್ವ ವ್ಯವಸ್ಥೆಯ ಮಾಲೀಕನಿದ್ದಂತೆ. ಈ ಚುನಾವಣೆ ಯಾರಿಗೂ ಬೇಕಾಗಿರಲಿಲ್ಲ. ಆದರೆ, ಅಪ್ಪ-ಮಕ್ಕಳ ಭ್ರಷ್ಟ ಹಣದಿಂದ ಚುನಾವಣೆ ಬರುವಂತಾಗಿದೆ. ಯಡಿಯೂರಪ್ಪ ಚುನಾವಣೆಯನ್ನು ಸಂತೆಯ ಸಾಮಾನೆಂದು ಭಾವಿಸಿದ್ದಾರೆ.

ರಾಜಕಾರಣವನ್ನು ವ್ಯಾಪಾರೀಕರಣ ಮಾಡಲು ಹೊರಟಿರುವ ಯಡಿಯೂರಪ್ಪ, ಹಿಂದೆ ಸಂಸದರಾಗಿದ್ದಾಗ ಈ ಕ್ಷೇತ್ರಕ್ಕೆ ಏನು ಮಾಡಿದ್ದರು. ನಂತರ ಸಂಸದರಾದ ಅವರ ಮಗ ರಾಘವೇಂದ್ರ ಕ್ಷೇತ್ರಕ್ಕೆ ಮಾಡಿದ್ದಾದರೂ ಏನು ಎಂಬುದನ್ನೆಲ್ಲ ಜನ ಅರಿಯಬೇಕಿದೆ ಎಂದರು. ಜಿಲ್ಲೆಯ ಜನತೆ ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ, ಯಡಿಯೂರಪ್ಪ ಮತ್ತು ರಾಘವೇಂದ್ರನನ್ನು ಬುಡಸಮೇತ ಕಿತ್ತು, ರಾಜಕಾರಣಕ್ಕೆ ಅಂಟಿದ ವಿಷವನ್ನು ತೆಗೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next