Advertisement

Madhya Pradesh: ಮತ ಹಾಕಿದವರಿಗೆ ಪೋಹಾ, ಜಿಲೇಬಿ

09:15 PM Oct 14, 2023 | Team Udayavani |

ಇಂದೋರ್‌: ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಪ್ರಿಯ ಶಾಪಿಂಗ್‌ ಸ್ಥಳ “56 ದೂಕಾನ್‌” ಎಂಬ ಸ್ಥಳದಲ್ಲಿನ ಮಳಿಗೆಯ ಮಾಲೀಕರು ಹೆಚ್ಚಿನ ಪ್ರಮಾಣದಲ್ಲಿ ಮತದಾನ ಉಂಟಾಗಲು ಹೊಸ ಯೋಜನೆ ಹಾಕಿಕೊಂಡಿದ್ದಾರೆ.

Advertisement

ಮೊದಲು ಮತದಾನ ಮಾಡಿದವರಿಗೆ ಪೋಹಾ ಮತ್ತು ಜಿಲೇಬಿಯನ್ನು ಉಚಿತವಾಗಿ ನೀಡಲು ತೀರ್ಮಾನಿಸಿದ್ದಾರೆ. ತಮ್ಮ ತಮ್ಮ ಮತಗಟ್ಟೆಯ ವ್ಯಾಪ್ತಿಗೆ ಬೇಗನೆ ಹೋಗಿ ಮತಹಾಕಿ ಬಂದವರು ಕೈಬೆರಳಿಗೆ ಹಾಕಿದ ಶಾಯಿಯ ಗುರುತು ತೋರಿಸಿದವರಿಗೆ ನ.17ರಂದು ಉಚಿತವಾಗಿ ಬೆಳಗ್ಗಿನ ಉಪಾಹಾರ ನೀಡಲಾಗುತ್ತದೆ ಎಂದು ಶನಿವಾರ ಪ್ರಕಟಿಸಿದ್ದಾರೆ. ಈ ಬಗ್ಗೆ ಮತಾನಾಡಿದ “56 ದೂಕಾನ್‌’ ಮಳಿಗೆಗಳ ಅಧ್ಯಕ್ಷ ಗುಂಜನ್‌ ಶರ್ಮ ನ.17ರ ಬೆಳಗ್ಗೆಯಿಂದ ರಾತ್ರಿ 9 ಗಂಟೆಯ ವರೆಗೆ ಈ ವ್ಯವಸ್ಥೆ ಇರಲಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next