ಸಿದ್ದಾಪುರ: ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಪೋಕ್ಸೋ ಪ್ರಕರಣದಡಿ ಪೊಲೀಸರು ಬಂಧಿಸಿರುವ ಘಟನೆ ಕುಂದಾಪುರ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಶಿವಮೊಗ್ಗ ಮೂಲದವರೆನ್ನಲಾದ ಪ್ರವೀಣ, ಅಜಯ್ ಬಂಧಿತ ಆರೋಪಿಗಳು.
ಘಟನೆಯ ಹಿನ್ನೆಲೆ: 8ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಸಿದ್ದಾಪುರ ಗ್ರಾಮದ ಐರಬೈಲ್ಲು ಎಂಬಲ್ಲಿ ಅವಳ ಅಜ್ಜಿ ಮನೆಯಲ್ಲಿ ವಾಸವಾಗಿದ್ದು, ಶುಕ್ರವಾರ (ನ.11 ರಂದು) ಸಂಜೆ 4:30ರ ವೇಳೆಗೆ ಬಾಲಕಿ ಮನೆಯಲ್ಲಿರುವಾಗ ಆರೋಪಿಗಳು ಅವಳನ್ನು ಪುಸಲಾಯಿಸಿ ಮನೆಯ ಹತ್ತಿರದ ಪುಸಲಾಯಿಸಿ ಮನೆಯ ಹತ್ತಿರದ ಮೆಣಸಿನ ಹಾಡಿಯ ಕಾಡಿಗೆ ಕರೆದುಕೊಂಡು ಹೋಗಿದ್ದಾರೆ. ಅಪ್ರಾಪ್ತೆ ಮೈ ಕೈ ಮುಟ್ಟಿ ಆರೋಪಿಗಳು ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.
ಬಾಲಕಿ ಪ್ರತಿರೋಧ ಒಡ್ಡಿದರೂ, ಅವಳ ಮಾತನ್ನು ಕೇಳದೇ ಆರೋಪಿಗಳು ಆಕೆಯೊಂದಿಗೆ ಲೈಂಗಿಕವಾಗಿ ಅಸಭ್ಯ ವರ್ತನೆ ತೋರಿದ್ದಾರೆ. ಆಗ ಪ್ರಜ್ಜೆ ತಪ್ಪಿದ ರೀತಿ ಆಗಿ ಕಾಡಿನಲ್ಲಿ ಬಿದ್ದು ಕೊಂಡಿದ್ದಾಳೆ. ಬಾಲಕಿಯನ್ನು ಊರಿನವರು ಹುಡುಕಾಡಿ ಶಂಕರನಾರಾಯಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
Related Articles
ಶಂಕರನಾರಯಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.