ಕಾಸರಗೋಡು: 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಕಾಲಿಕಡವು ಕೊಲ್ಲರೋಟಿ ದಿನೇಶನ್ ಪಿ.ಪಿ.(4)ಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(1) ಫೋಕ್ಸೋ ಕಾನೂನಿನ ಪ್ರಕಾರ ವಿವಿಧ ಸೆಕ್ಷನ್‌ಗಳಲ್ಲಾಗಿ ಒಟ್ಟು 21 ವರ್ಷ ಸಜೆ ಮತ್ತು 2 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ದಂಡ ಪಾವತಿಸದಿದ್ದಲ್ಲಿ ಮೂರು ವರ್ಷ ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಿದೆ. ಚಂದೇರ ಪೊಲೀಸರು ಫೋಕೊÕà ಕಾನೂನು ಪ್ರಕಾರ ಕೇಸು ದಾಖಲಿಸಿಕೊಂಡಿದ್ದರು.
ಓವರ್ ಲೋಡ್ : 10 ಲಾರಿ ವಶಕ್ಕೆ:
ಕಾಸರಗೋಡು: ನಿಗದಿತ ಪ್ರಮಾಣಕ್ಕಿಂತ ಅಧಿಕ ಭಾರದ ಸರಕುಗಳನ್ನು ಹೇರಿ ಸಾಗುವ ಲಾರಿ ಇತ್ಯಾದಿ ಸರಕು ವಾಹನಗಳನ್ನು ಪತ್ತೆ ಹಚ್ಚಲು ಆಪರೇಶನ್ ಓವರ್ ಲೋಡ್ ಎಂಬ ಹೆಸರಿನಲ್ಲಿ ವಿಜಿಲೆನ್ಸ್ ರಾಜ್ಯ ವ್ಯಾಪಕವಾಗಿ ನಡೆಸಿದ ದಾಳಿಯ ಅಂಗವಾಗಿ ಕಾಸರಗೋಡಿನಲ್ಲಿ 10 ಲಾರಿಗಳನ್ನು ವಶಪಡಿಸಲಾಯಿತು.
Related Articles
ಎಂಟು ಟೋರೆಸ್ಟ್ ಹಾಗ 2 ಟಿಪ್ಪರ್ ಲಾರಿಗಳನ್ನು ವಶಪಡಿಸಲಾಗಿದೆ. ಕಾಸರಗೋಡು ವಿಜಿಲೆನ್ಸ್ ಡಿವೈಎಸ್‌ಪಿ ಕೆ.ವಿ.ವೇಣುಗೋಪಾಲ್, ಇನ್ಸ್‌ಪೆಕ್ಟರ್ ಸಿಬಿ ಥೋಮಸ್ ನೇತೃತ್ವ ನೀಡಿದ್ದರು. ವಶಪಡಿಸಿಕೊಂಡ ಹತ್ತು ಲಾರಿಗಳಲ್ಲಿ 15 ರಿಂದ 20 ಟನ್‌ನಷ್ಟು ಹೆಚ್ಚುವರಿ ಸರಕು ಹೇರಿ ಸಾಗುತ್ತಿತ್ತು.