Advertisement

ಹೊಳೆಹೊನ್ನೂರು:ಮೂರು ವರ್ಷ ಪ್ರೀತಿ: ಬಾಲಕಿ ಜತೆ ವಿವಾಹ, ಯುವಕನ ಬಂಧನ

10:33 PM Aug 11, 2022 | Suhan S |

ಹೊಳೆಹೊನ್ನೂರು: ಮೂರು ವರ್ಷಗಳಿಂದ  ಪ್ರೀತಿಸುತ್ತಿದ್ದ ಅಪ್ರಾಪ್ತ ವಯಸ್ಕ ಯುವತಿಯನ್ನು ಮದುವೆಯಾಗಿರುವ ಹಿನ್ನೆಲೆಯಲ್ಲಿ ಪೋಕ್ಸೋ ಕಾಯ್ದೆಯಡಿಯಲ್ಲಿ ಗ್ರಾಮದ ಪ್ರಕಾಶ್‌ ಎಂಬಾತನನ್ನು ಹೊಳೆಹೊನ್ನೂರು ಪೊಲೀಸರು ಬಂಧಿಸಿದ್ದಾರೆ.

Advertisement

ಬಾಲಕಿಯು 13 ವರ್ಷ ಪ್ರಾಯದಲ್ಲೇ ಅದೇ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದಳು. ಮನೆಯಲ್ಲಿ ಗೊತ್ತಾದರೆ ಸಮಸ್ಯೆಯಾದೀತು ಎಂದು ಬಾಲಕಿಯು ಒಂದೂವರೆ ತಿಂಗಳ ಹಿಂದೆ ಯುವಕನೊಂದಿಗೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಆಕೆಯ ಮನೆಯವರು  ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು ಹಾಗೂ ಈ ಯುವಕನೇ ಕರೆದೊಯ್ದಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು.

ಮನೆ ತೊರೆದಿದ್ದ ಜೋಡಿ ದೇವಸ್ಥಾನವೊಂ ರಲ್ಲಿ ಮದುವೆಯಾಗಿ, ಈಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.  ಬಾಲಕಿಯನ್ನು ಬಾಲಮಂದಿರದಲ್ಲಿ ಇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next