Advertisement
ಕೋವಿಡ್ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಕಂಪನಿಯು ವರ್ಚುವಲ್ ಲಾಂಚ್ ಈವೆಂಟ್ ನಲ್ಲಿ ಅನಾವರಣಗೊಳಿಸಲು ನಿರ್ಧರಿಸಿತ್ತು. ಆದರೇ, ಅದರ ಬದಲಾಗಿ, ಬೆಲೆ, ಮಾರಾಟದ ವಿವರಗಳು ಮತ್ತು ವಿಶೇಷಣಗಳನ್ನು ಬಹಿರಂಗಪಡಿಸುವ ಸರಣಿಯ ಟ್ವೀಟ್ ಗಳ ಮೂಲಕ ಫೋನ್ ಅನ್ನು ಕಂಪೆನಿ ಬಿಡುಗಡೆಗೊಳಿಸಿದೆ.
Related Articles
Advertisement
ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್, 70 ಪ್ರತಿಶತ ಎನ್ ಟಿ ಎಸ್ ಸಿ ವ್ಯಾಪ್ತಿ, 6.53-ಇಂಚಿನ ಫುಲ್-ಎಚ್ ಡಿ + (1,080×2,340 ಪಿಕ್ಸೆಲ್‌ಗಳು) ಡಿಸ್ಪ್ಲೇ ಹೊಂದಿದೆ.
ಪೊಕೊ ಎಂ 2 ರಿಲೋಡೆಡ್ ಪೊಕೊ ಎಂ 2 ನಂತೆ ಒಂದೇ ರೀತಿಯ ಕ್ಯಾಮೆರಾ ವಿಶೇಷತೆಗಳನ್ನು ಹೊಂದಿದೆ. ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಎಫ್ / 2.2 ಅಪರ್ಚರ್ ಹೊಂದಿರುವ 13 ಮೆಗಾಪಿಕ್ಸೆಲ್ ಪ್ರೈಮರಿ ಶೂಟರ್, ಎಫ್ / 2.2 ಅಪರ್ಚರ್ ಮತ್ತು 118 ಡಿಗ್ರಿ ಫೀಲ್ಡ್ ವ್ಯೂ ಹೊಂದಿರುವ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಹೊಂದಿರುವ 8 ಮೆಗಾಪಿಕ್ಸೆಲ್ ಸೆನ್ಸಾರ್, 5 ಮೆಗಾಪಿಕ್ಸೆಲ್ ಸೆನ್ಸಾರ್ ನನ್ನು ಒಳಗೊಂಡಿದೆ..
ಸ್ಮಾರ್ಟ್ಫೋನ್ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ ಮತ್ತು ಹಿಂಭಾಗದ ಫಿಂಗರ್ಪ್ರಿಂಟ್ ಸ್ಕ್ಯಾನರ್ ಹೊಂದಿದೆ. ಪೊಕೊ ಎಂ 2 ರಿಲೋಡೆಡ್ ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ 802.11 ಎಸಿ, 4 ಜಿ ವೋಲ್ಟಿಇ ಬೆಂಬಲ, ಬ್ಲೂಟೂತ್ 5.0, ಐಆರ್ ಬ್ಲಾಸ್ಟರ್, ಜಿಪಿಎಸ್, 3.5 ಎಂಎಂ ಹೆಡ್ಫೋನ್ ಜ್ಯಾಕ್ ಮತ್ತು ಯುಎಸ್ಬಿ ಟೈಪ್-ಸಿ ಪೋರ್ಟ್ ಸೇರಿವೆ.