Advertisement

PM’s vision ಖಾತೆ ಬದಲಾವಣೆ ಶಿಕ್ಷೆಯಲ್ಲ: ಕಿರಣ್ ರಿಜಿಜು

02:50 PM May 19, 2023 | Team Udayavani |

ಹೊಸದಿಲ್ಲಿ: ನನ್ನ ಖಾತೆ ಬದಲಾವಣೆ ಮಾಡಿರುವುದು ಶಿಕ್ಷೆಯಲ್ಲ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಎಂದು ಕೇಂದ್ರ ಸಚಿವ ಕಿರಣ್ ರಿಜಿಜು ಹೇಳಿಕೆ ನೀಡಿದ್ದಾರೆ.

Advertisement

ಸಂಪುಟ ಸರ್ಜರಿಯ ಸಮಯದಲ್ಲಿ ಕೇಂದ್ರ ಕಾನೂನು ಸಚಿವ ಸ್ಥಾನದಿಂದ ಬದಲಾಯಿಸಲ್ಪಟ್ಟ ಒಂದು ದಿನದ ನಂತರ ರಾಷ್ಟ್ರ ರಾಜಧಾನಿಯ ಲೋಧಿ ರಸ್ತೆಯಲ್ಲಿರುವ ಪೃಥ್ವಿ ಭವನದಲ್ಲಿ ಶುಕ್ರವಾರ ಬೆಳಗ್ಗೆ ಭೂ ವಿಜ್ಞಾನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾಧ್ಯಮಗಳೊಂದಿಗೆ ರಿಜಿಜು ಮಾತನಾಡಿ,ಕಾರ್ಯವಿಧಾನ ವಾಡಿಕೆಯ ಪ್ರಕ್ರಿಯೆ ಎಂದು ಉಲ್ಲೇಖಿಸಿದರು. ಇದು ಪ್ರಧಾನಿಯವರ ದೂರದೃಷ್ಟಿಯ ಒಂದು ಭಾಗವೇ ಹೊರತು ನನಗೆ ಶಿಕ್ಷೆಯಲ್ಲ ಎಂದು ಅವರು ಒತ್ತಿ ಹೇಳಿದರು.

“ಈ ಬದಲಾವಣೆಯು ವಾಡಿಕೆಯ ಪ್ರಕ್ರಿಯೆಯಾಗಿದೆ. ಯಾರಾದರೂ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು. ಯಾವುದೇ ತಪ್ಪಾಗಿಲ್ಲ. ನನ್ನ ವಿರುದ್ಧ ಮಾತನಾಡುವುದು ಪ್ರತಿಪಕ್ಷಗಳ ಕರ್ತವ್ಯ, ಅವರು ಮಾತನಾಡಲಿ” ಎಂದು ರಿಜಿಜು ಹೇಳಿದರು.

ಲೋಕಸಭಾ ಚುನಾವಣೆಗೆ ಕೇವಲ ಒಂದು ವರ್ಷ ಮುಂಚಿತವಾಗಿ, ಗುರುವಾರ ನಡೆದ ಹಠಾತ್ ಸಂಪುಟ ಸರ್ಜರಿಯಲ್ಲಿ ಕಿರಣ್ ರಿಜಿಜು ಅವರನ್ನು ಬದಲಾಯಿಸಿ ಕೇಂದ್ರ ಕಾನೂನು ಸಚಿವರಾಗಿ ಅರ್ಜುನ್ ರಾಮ್ ಮೇಘವಾಲ್ ಅವರನ್ನು ನೇಮಿಸಲಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next