Advertisement

PMLA court ; ಹೇಮಂತ್ ಸೊರೇನ್‌ಗೆ 5 ದಿನಗಳ ಇ.ಡಿ. ರಿಮಾಂಡ್

05:51 PM Feb 02, 2024 | Team Udayavani |

ರಾಂಚಿ: ಭೂ ವಂಚನೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಶುಕ್ರವಾರ ವಿಶೇಷ ಪಿಎಂಎಲ್‌ಎ ನ್ಯಾಯಾಲಯವು ಐದು ದಿನಗಳ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸಿದೆ ಎಂದು ವಕೀಲರು ತಿಳಿಸಿದ್ದಾರೆ.

Advertisement

ಇ.ಡಿ. ಗುರುವಾರ ಸೊರೇನ್‌ ಅವರನ್ನು 10 ದಿನಗಳ ಕಸ್ಟಡಿಗೆ ಕೋರಿತ್ತು. ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿ ಜೆಎಂಎಂ ಒಂದು ದಿನದ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು.

ಜನವರಿ 31 ರಂದು ರಾತ್ರಿ ಸೊರೇನ್ ಅವರನ್ನು ಸುದೀರ್ಘ ವಿಚಾರಣೆಯ ನಂತರ ಇ.ಡಿ.ಅಧಿಕಾರಿಗಳು ಬಂಧಿಸಿದ್ದರು. ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next