ಹೈದರಾಬಾದ್: ಹನ್ನೊಂದನೇ ಶತಮಾನದ ಸಂತ, ಸಾಮಾಜಿಕ ಬದಲಾವಣೆಯ ಹರಿಕಾರ, ವಿಶಿಷ್ಟಾದ್ವೆ „ತ ಪ್ರತಿಪಾದಕ ಶ್ರೀ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ಅನಾವರಣಕ್ಕೆ ಸಿದ್ಧವಾಗಿದೆ.
ಹೈದರಾಬಾದ್‌ನ ಹೊರವಲಯದಲ್ಲಿ ಇದನ್ನು ನಿರ್ಮಿಸಲಾಗಿದ್ದು, ಫೆ. 5ರಂದು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಇದನ್ನು ಸಮಾನತೆಯ ಪ್ರತಿಮೆ ಎಂದು ಕರೆಯಲಾಗಿದ್ದು, ಗುಜರಾತ್‌ನ ಏಕತಾ ಪ್ರತಿಮೆಯ ಅನಂತರ ದೇಶದಲ್ಲೇ ಅತೀ ಎತ್ತರದ ಪ್ರತಿಮೆ ಎನಿಸಿಕೊಳ್ಳಲಿದೆ.
54 ಅಡಿ ಎತ್ತರದ ಬುನಾದಿ
ಶ್ರೀ ರಾಮಾನುಜಾಚಾರ್ಯರ ಸಮಾನತೆಯ ಪ್ರತಿಮೆಯನ್ನು 54 ಅಡಿ ಎತ್ತರದ “ಭದ್ರವೇದಿ’ ಎಂಬ ಬುನಾದಿಯ ಮೇಲೆ ನಿರ್ಮಿಸಲಾಗಿದೆ. ಇಲ್ಲಿ ಡಿಜಿಟಲ್ ಲೈಬ್ರೆರಿ, ಸಂಶೋಧನ ಕೇಂದ್ರ, ಪುರಾತನ ಭಾರತದ ರಚನೆ, ಥಿಯೇಟರ್, ಶೈಕ್ಷಣಿಕ ಗ್ಯಾಲರಿ ಮತ್ತು ಬಹುಭಾಷೆಯ ಆಡಿಯೋ ಟೂರ್ ವ್ಯವಸ್ಥೆ ಇದೆ.
2016ರಲ್ಲಿ ಆರಂಭ
ಶ್ರೀ ರಾಮಾನುಜಾಚಾರ್ಯರು ಜನಿಸಿ ಒಂದು ಸಾವಿರ ವರ್ಷಗಳಾದ ಹಿನ್ನೆಲೆಯಲ್ಲಿ 2016ರಲ್ಲಿಯೇ ಪ್ರತಿಮೆಯ ನಿರ್ಮಾಣ ಆರಂಭವಾಗಿತ್ತು.
Related Articles
ಎರಡನೇ ಅತ್ಯಂತ ಎತ್ತರದ ಪ್ರತಿಮೆ
ಥೈಲ್ಯಾಂಡ್ ನಲ್ಲಿರುವ ಗ್ರೇಟ್ ಬುದ್ಧನ ಕುಳಿತಿರುವ ಪ್ರತಿಮೆ ಅತ್ಯಂತ ಎತ್ತರವಾದ ಪ್ರತಿಮೆ. ಇದು 302 ಅಡಿ ಎತ್ತರವಿದೆ. ಇದನ್ನು ಬಿಟ್ಟರೆ ರಾಮಾನುಜಾಚಾರ್ಯರ ಪ್ರತಿಮೆಯೇ ಎರಡನೇ ಎತ್ತರದ ಪ್ರತಿಮೆಯಾಗಲಿದೆ. ನಿಂತಿರುವ ಪ್ರತಿಮೆಗಳ ಸಾಲಿನಲ್ಲಿ ಗುಜರಾತ್‌ನಲ್ಲಿರುವ ಸರ್ದಾರ್ ವಲ್ಲಭಬಾಯ್ ಪಟೇಲ್ ಪ್ರತಿಮೆಯೇ ಅತ್ಯಂತ ಎತ್ತರದ್ದು, ಇದು 597 ಅಡಿ ಎತ್ತರವಿದೆ.