Advertisement
ಇದರ ಭಾಗವಾಗಿ ದೇಶಾದ್ಯಂತ ಪ್ರಧಾನ ಮಂತ್ರಿಯವರ ಪಿಎಂಶ್ರೀ ಯೋಜನೆಯಡಿ ಶಾಲೆಗಳ ಆಯ್ಕೆ ಬಹುತೇಕ ಪೂರ್ಣಗೊಂಡಿದೆ. ದ.ಕ. ಜಿಲ್ಲೆಯ 8 ಹಾಗೂ ಉಡುಪಿ ಜಿಲ್ಲೆಯ ನಾಲ್ಕು ಶಾಲೆಗಳು ಯೋಜನೆಯಡಿ ಆಯ್ಕೆಯಾಗಿವೆ. ಈ ಶಾಲೆಗೆ ಬೇಕಿರುವ ಮೂಲ ಸೌಕರ್ಯ ಹಾಗೂ ಕಲಿಕೆಗೆ ಪೂರಕವಾದ ಪರಿಕರಗಳನ್ನು ಮುಂದಿನ ಐದು ವರ್ಷದಲ್ಲಿ ಕೇಂದ್ರ ಸರಕಾರದಿಂದ ಅಗತ್ಯಗಳಿಗೆ ಅನುಸಾರವಾಗಿ ಒದಗಿಸಲಾಗುತ್ತದೆ.ಕರ್ನಾಟಕದ 129 ಸರಕಾರಿ ಶಾಲೆಗಳು ಆಯ್ಕೆ ಯಾಗಿವೆ. ಪ್ರಧಾನ ಮಂತ್ರಿ ಸ್ಕೂಲ್ಸ್ ಫಾರ್ ರೈಸಿಂಗ್ ಇಂಡಿಯಾ ಎನ್ನುವ ಸ್ಕೀಂನಲ್ಲಿ ದೇಶದಲ್ಲಿ ಒಟ್ಟಾರೆ 14,500 ಶಾಲೆಗಳನ್ನು ಗುರುತಿಸಿದೆ.
ಶಾಲೆಗೆ ಅಗತ್ಯವಿರುವ ಸ್ಮಾರ್ಟ್ ಲ್ಯಾಬ್, ಸ್ಮಾರ್ಟ್ ತರಗತಿಗಳು, ಸುಸಜ್ಜಿತ ಗ್ರಂಥಾಲಯ, ಕ್ರೀಡಾ ಕೊಠಡಿ, ತರಗತಿ ಕೊಠಡಿ, ಶೌಚಾಲಯ ಹೀಗೆ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿ ಗಳು ಪೂರ್ಣ ಪ್ರಮಾಣದಲ್ಲಿ ಪ್ರಗತಿ ಸಾಧಿ ಸಲು ಬೇಕಾದ ಸಲ ಕರಣೆ ಗಳನ್ನು ಒದಗಿಸಲಿದೆ. ಈ ಯೋಜನೆ ಯಡಿ ಯಲ್ಲಿ ಪಠ್ಯಕ್ರಮದ ರಚನೆ ಮತ್ತು ಬೋಧನಾ ಶೈಲಿಯನ್ನು ವಿವಿಧ ಹಂತಗಳಾಗಿ ವಿಂಗಡಿಸಲಾಗಿದೆ. ಅಡಿಪಾಯ, ಪೂರ್ವಸಿದ್ಧತೆ, ಮಧ್ಯಮ ಮತ್ತು ಮಾಧ್ಯಮಿಕ ಎಂಬ ವಿಭಾಗಗಳಾಗಿವೆ ವಿಭಜಿಸಲಾಗಿದೆ. ಅಡಿಪಾಯದ ವರ್ಷಗಳು (ಪ್ರಿ-ಸ್ಕೂಲ್ ಮತ್ತು 1, 2ನೇ ತರಗತಿ) ಆಟದ ಆಧಾರಿತ ಕಲಿಕೆಯನ್ನು ಒಳಗೊಂಡಿರುತ್ತದೆ. ಪೂರ್ವಸಿದ್ಧತ ಹಂತದಲ್ಲಿ (3ರಿಂದ 5ನೇ ತರಗತಿ) ಕೆಲವು ಔಪಚಾರಿಕ ತರಗತಿಯ ಬೋಧನೆಯೊಂದಿಗೆ ಲಘು ಪಠ್ಯಪುಸ್ತಕಗಳನ್ನು ಪರಿಚಯಿಸಬೇಕು. ವಿಷಯ ಶಿಕ್ಷಕರನ್ನು ಮಧ್ಯಮ ಹಂತದಲ್ಲಿ (6ರಿಂದ 8ನೇ ತರಗತಿ) ಪರಿಚಯಿಸಬೇಕು. ಸೆಕೆಂಡರಿ ಹಂತ (9ರಿಂದ 12ನೇ ತರಗತಿ) ಕಲೆ ಮತ್ತು ವಿಜ್ಞಾನ ಅಥವಾ ಇತರ ವಿಭಾಗಗಳನ್ನು ಒಳಗೊಂಡಿರುತ್ತದೆ. ಆಯ್ಕೆ ಹೇಗೆ?
ಎಲ್ಲ ಜಿಲ್ಲೆಯಿಂದ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿ ಆನ್‌ಲೈನ್ ಮೂಲಕ ಕೇಂದ್ರಕ್ಕೆ ಅಪ್‌ಲೋಡ್ ಮಾಡಲಾಗಿದೆ. ಕೇಂದ್ರದಿಂದ ಪರಿಶೀಲಿಸಿ, ಆಯಾ ಜಿಲ್ಲೆಗಳಲ್ಲಿ ಆಯ್ದ ಶಾಲೆಗಳನ್ನು ಆಯ್ಕೆ ಮಾಡಿಕೊಂಡಿವೆ. ಆಯ್ಕೆಯಾಗಿರುವ ಎಲ್ಲ ಶಾಲೆಗಳಿಗೂ ಮಾಹಿತಿಯನ್ನು ಒದಗಿಸಲಾಗಿದೆ.
Related Articles
ಆಯ್ಕೆಯಾಗಿರುವ ಶಾಲೆಗಳು ತಮ್ಮ ಶಾಲೆಗೆ ಅಗತ್ಯವಿರುವ ಭೌತಿಕ ಸೌಲಭ್ಯ ಹಾಗೂ ಪಠ್ಯಕ್ಕೆ ಸಂಬಂಧಿಸಿದ ಪರಿಕರಗಳ ಬಗ್ಗೆ ಆನ್‌ಲೈನ್ ಮೂಲಕವೇ ಪ್ರಸ್ತಾವನೆ ಸಲ್ಲಿಸಬೇಕು. ಅದರಂತೆ ಯೋಜನೆಯಡಿಯಲ್ಲಿ ಕೇಂದ್ರ ಸರಕಾರ ಸೌಲಭ್ಯ ಒದಗಿಸಲಿದೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ಪೂರಕವಾಗಿ ಪೂರ್ವ ಪ್ರಾಥಮಿಕ ತರಗತಿಂದ ದ್ವಿತೀಯ ಪಿಯುಸಿ ತನಕ ಒಂದೇ ಸೂರಿನಡಿ ಬರುವಂತೆ ಹಂತಹಂತವಾಗಿ ಪರಿವರ್ತನೆ ಮಾಡಲಿದೆ.
Advertisement
ಆಯ್ಕೆಯಾದ ಶಾಲೆಗಳು-ಬೆಳ್ತಂಗಡಿಯ ಬಜಿರೆ ಸ.ಹಿ.ಪ್ರಾ. ಶಾಲೆ
-ಮತ್ತೂರು ಕರ್ನಾಟಕ ಪಬ್ಲಿಕ್ ಸ್ಕೂಲ್
-ನೆಲ್ಯಪದವು ಮಾದರಿ ಸ.ಹಿ.ಪ್ರಾ. ಶಾಲೆ
-ಮೂಡು ಮರ್ನಾಡು ಸ.ಹಿ.ಪ್ರಾ. ಶಾಲೆ
-ಪುತ್ತೂರಿನ ವೀರಮಂಗಲ ಸ.ಹಿ.ಪ್ರಾ. ಶಾಲೆ
-ಸುಳ್ಯದ ಗುತ್ತಿಗಾರು ಸ.ಹಿ.ಪ್ರಾ. ಶಾಲೆ
-ಬಂಟ್ವಾಳದ ಸುರಿಬೈಲು ಸ.ಹಿ.ಪ್ರಾ. ಶಾಲೆ
-ಕಡಬದ ನೆಲ್ಯಾಡಿ ಸ.ಹಿ.ಪ್ರಾ. ಶಾಲೆ
-ಬೈಂದೂರಿನ ಶಿರೂರು ಸ.ಹಿ.ಪ್ರಾ. ಶಾಲೆ
-ಕುಂದಾಪುರದ ತೆಕ್ಕಟ್ಟೆ ಸ.ಹಿ.ಪ್ರಾ. ಶಾಲೆ
-ಉಡುಪಿಯ ಕುಕ್ಕೆಹಳ್ಳಿ ಸ.ಹಿ.ಪ್ರಾ. ಶಾಲೆ
-ಹೆಬ್ರಿ ಸ.ಹಿ.ಪ್ರಾ. ಶಾಲೆ ಪಿಎಂಶ್ರೀ ಯೋಜನೆಯಡಿ ಆಯ್ಕೆಯಾದ ಶಾಲೆಗಳನ್ನು ಎನ್‌ಇಪಿಗೆ ಪೂರಕವಾಗಿ ನವೋದಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.
– ಡಿ.ಆರ್. ನಾಯ್ಕ, ಗಣಪತಿ ಕೆ.,
ಡಿಡಿಪಿಐ, ದ.ಕ. ಮತ್ತು ಉಡುಪಿ ಜಿಲ್ಲೆ.