Advertisement

ಪಿಎಂಓಗೆ 5,000 ರೂ. ದಂಡ ಹೇರಿದ ಅಲಹಾಬಾದ್‌ ಹೈಕೋರ್ಟ್‌

11:26 AM Jan 18, 2018 | Team Udayavani |

ಹೊಸದಿಲ್ಲಿ : ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿ ಅಫಿದಾವಿತ್‌ ಸಲ್ಲಿಸಲು ವಿಫ‌ಲವಾದ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ (ಪಿಎಂಓ) ಅಲಹಾಬಾದ್‌ ಹೈಕೋರ್ಟಿನ ಲಕ್ನೋ ಪೀಠ 5,000 ರೂ. ದಂಡ ಹೇರಿದೆ. 

Advertisement

ಕಂಟ್ರೋಲರ್‌ ಆಫ್ ಆಡಿಟರ್‌ ಜನರಲ್‌ (ಸಿಎಜಿ) ಅವರ ವರದಿಯ ಆಧಾರದಲ್ಲಿ ಕ್ರಮಕ್ಕೆ ಆಗ್ರಹಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುನೀಲ್‌ ಕಂಡು ಎಂಬವರು ಸಲ್ಲಿಸಿದ್ದರು. 

ಕೇಂದ್ರ ಸರಕಾರ ಸಿಎಜಿ ಅವರ ಕೇವಲ 10 ವರದಿಗಳನ್ನು ಮಾತ್ರವೇ ಪರಿಗಣಿಸಿ ಉಳಿದವುಗಳನ್ನು ಕಡೆಗಣಿಸಿದೆ ಎಂದು ಪಿಐಎಲ್‌ನಲ್ಲಿ ದೂರಲಾಗಿತ್ತು. 

ಪಿಎಂಓ ಈ ಬಗ್ಗೆ ನಿಗದಿತ ಗಡುವಿನೊಳಗೆ ಅಫಿದಾವಿತ್‌ ಸಲ್ಲಿಸದ ಕಾರಣಕ್ಕೆ ನ್ಯಾ. ಸುಧೀರ್‌ ಅಗ್ರವಾಲ್‌ ಮತ್ತು ನ್ಯಾ. ಅಬ್ದುಲ್‌ ಮೊಯಿನ್‌ ಅವರನ್ನು ಒಳಗೊಂಡ ಪೀಠ ಪಿಎಂಓಗೆ  5,000 ರೂ. ದಂಡ ಹೇರಿತು.

Advertisement

Udayavani is now on Telegram. Click here to join our channel and stay updated with the latest news.

Next