Advertisement

ನಾಳೆ ‘ಪರೀಕ್ಷಾ ಪೆ ಚರ್ಚಾ’ : ಪರೀಕ್ಷೆಗಳು ಜೀವನದ ಕನಸುಗಳ ಅಂತ್ಯವಲ್ಲ : ಪ್ರಧಾನಿ ಮೋದಿ

11:51 AM Apr 06, 2021 | Team Udayavani |

ನವ ದೆಹಲಿ :  ಪ್ರಧಾನಿ ನರೇಂದ್ರ ಮೋದಿಯವರ ವಿದ್ಯಾರ್ಥಿಗಳೊಂದಿಗಿನ ವಾರ್ಷಿಕ ಸಂವಾದ ಕಾರ್ಯಕ್ರಮ “ಪರಿಕ್ಷಾ ಪೆ ಚರ್ಚಾ” ಏಪ್ರಿಲ್ 7 ರಂದು ನಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ.

Advertisement

“ಹೊಸ ಸ್ವರೂಪ, ವ್ಯಾಪಕವಾದ ವಿಷಯಗಳ ಕುರಿತು ಹಲವಾರು ಆಸಕ್ತಿದಾಯಕ ಪ್ರಶ್ನೆಗಳು ಮತ್ತು ನಮ್ಮ ಕೆಚ್ಚೆದೆಯ # ಎಕ್ಸಮ್ ವಾರಿಯರ್ಸ್, ಪೋಷಕರು ಮತ್ತು ಶಿಕ್ಷಕರೊಂದಿಗೆ ಸ್ಮರಣೀಯ ಚರ್ಚೆ. ಏಪ್ರಿಲ್ 7 ರಂದು ಸಂಜೆ 7 ಗಂಟೆಗೆ ‘ಪರಿಕ್ಷಾ ಪೆ ಚರ್ಚಾ’ ವೀಕ್ಷಿಸಿ” ಎಂದು ಪ್ರಧಾನಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಓದಿ : ಈ ಮದುವೆ ಗರ್ಭಧಾರಣೆಯ ಫಲಿತಾಂಶವಲ್ಲ : ನಟಿ ದಿಯಾ ಮಿರ್ಜಾ  

ತಮ್ಮ ಟ್ವೀಟ್ ಜೊತೆಗೆ, ಈ ವರ್ಷದ ‘ಪರಿಕ್ಷಾ ಪೆ ಚರ್ಚಾ’ದ ಮುಖ್ಯಾಂಶಗಳನ್ನು ವಿವರಿಸುವ ವೀಡಿಯೊವನ್ನು ಸಹ ಅವರು ಟ್ಯಾಗ್ ಮಾಡಿದ್ದಾರೆ.

ಕೋವಿಡ್ 19 ಮಹಾಮಾರಿಯ ಕರಿ ನೆರಳಿನಲ್ಲಿ ನಾವಿದ್ದೇವೆ. ಆ ಕಾರಣದಿಂದಾಗಿ ನೇರವಾಗಿ ನಿಮ್ಮೊಂದಿಗೆ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿಲ್ಲ. ಈ ಬಾರಿ ಹೊಸ ಸ್ವರೂಪದ ವರ್ಷುವಲ್ ಆವೃತ್ತಿಯ ಮೂಲಕ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಪರೀಕ್ಷೆಗಳನ್ನು ಒಂದು ಅವಕಾಶವಾಗಿ ನೋಡಬೇಕು ಮತ್ತು ಪರೀಕ್ಷೆಗಳು ಜೀವನದ ಕನಸುಗಳ ಅಂತ್ಯವಲ್ಲ ಎಂದು ಮೋದಿ ವೀಡಿಯೋ ಸಂದೇಶದ ಮೂಲಕ ತಿಳಿಸಿದ್ದಾರೆ.

Advertisement

ಇನ್ನು, ವರ್ಚುವಲ್ ಈವೆಂಟ್‌ ನಲ್ಲಿ ಪ್ರಧಾನ ಮಂತ್ರಿ ಮಕ್ಕಳೊಂದಿಗೆ ಸ್ನೇಹಿತರಂತೆ ಮಾತನಾಡುತ್ತಾರೆ ಮತ್ತು ಶಿಕ್ಷಕರು ಮತ್ತು ಪೋಷಕರೊಂದಿಗೆ ಸಂವಹನ ನಡೆಸುತ್ತಾರೆ ಎಂದು ವೀಡಿಯೊದಲ್ಲಿ ಧ್ವನಿಮುದ್ರಿಕೆ ತಿಳಿಸಿದೆ.

ಇದು ಕೇವಲ ಪರೀಕ್ಷೆ ಹಾಗೂ ಪರೀಕ್ಷೆಗಳ ವಿಚಾರಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ. ವಿದ್ಯಾರ್ಥಿಗಳ ಹಾಗೂ ಪೋಷಕರಲ್ಲಿನ ಒತ್ತಡಗಳ ಬಗ್ಗೆಯೂ ಚರ್ಚೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಓದಿ : ಮೇ 4 ರ ನಂತರವಷ್ಟೇ ಸಾರಿಗೆ ನೌಕರರ ಬೇಡಿಕೆ ಈಡೇರಿಕೆ ಸಾಧ್ಯ: ಲಕ್ಷ್ಮಣ ಸವದಿ

Advertisement

Udayavani is now on Telegram. Click here to join our channel and stay updated with the latest news.

Next