ನವದೆಹಲಿ: ಮೂರು ವರುಷಗಳ ಹಿಂದೆ ಈ ದಿನ ನಾನು ನಿದ್ದೆ ಮಾಡಿರಲಿಲ್ಲ. ಆ ಒಂದು ಫೋನ್ ಕಾಲ್ ಗಾಗಿ ಕಾಯುತ್ತಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಸರ್ಜಿಕಲ್ ಸ್ಟ್ರೈಕ್ ನಡೆದು ಮೂರು ವರುಷವಾದ ಹಿನ್ನಲೆಯಲ್ಲಿ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸಿ ಮಾತನಾಡಿದ ಪ್ರಧಾನಿ ಮೋದಿ, ಸೆಪ್ಟೆಂಬರ್ 28 ಮರೆಯಲಾಗದ ದಿನ. ಆ ದಿನ ಪೋನ್ ರಿಂಗ್ ಆಗುವುದನ್ನೇ ಕಾಯುತ್ತಿದ್ದೆ. ನಮ್ಮ ಸೈನ್ಯದ ಶೌರ್ಯ, ಪರಾಕ್ರಮ ತಿಳಿಯಲು ಬಹಳ ಕಾತರನಾಗಿದ್ದೆ. ಅವರ ಧೈರ್ಯಕ್ಕೆ ಶಿರಭಾಗಿ ನಮಿಸುತ್ತೇನೆ ಎಂದು ತಿಳಿಸಿದರು.
ಜಮ್ಮು ಕಾಶ್ಮೀರದ ಸೇನಾ ಉರಿ ನೆಲೆಯ ಮೇಲೆ 2016 ರ ಸೆಪ್ಟೆಂಬರ್ 18 ರಂದು ಉಗ್ರರು ಆತ್ಮಾಹುತಿ ದಾಳಿ ನಡೆಸಿ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿ 19 ಭಾರತೀಯ ಯೋಧರನ್ನು ಬಲಿ ಪಡೆದಿದ್ದರು. ಈ ದಾಳಿಯಲ್ಲಿ ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಪಾಕಿಸ್ಥಾನದ ಜೈಷೆ ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡವಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ 2016ರ ಸೆಪ್ಟೆಂಬರ್ 28, 29ರ ಮಧ್ಯರಾತ್ರಿ ಐತಿಹಾಸಿಕ ಸರ್ಜಿಕಲ್ ದಾಳಿ ನಡೆಸಿತ್ತು. ಆ ಮೂಲಕ ಪಾಕಿಸ್ಥಾನಕ್ಕೆ ಮರ್ಮಾಘಾತ ನೀಡಿ ಇಡೀ ವಿಶ್ವಕ್ಕೆ ಸೇನೆಯ ಶಕ್ತಿ ಸಾಮಾರ್ಥ್ಯವನ್ನು ತೋರಿಸಿಕೊಟ್ಟಿತು.
WATCH PM Narendra Modi in Delhi: 3 years ago, on 28 Sept only, the brave soldiers of my country had showcased the glory of India before the world by executing the surgical strike. Remembering that night today, I salute the courage of our brave soldiers.