ಜೈಪುರ: ರಾಜಸ್ಥಾನದ ಬನ್ಸ್ವಾರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಶ್ಲಾಘಿಸಿದರು. ಮತ್ತು ತಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದ್ದ ದಿನಗಳನ್ನು ನೆನಪಿಸಿಕೊಂಡರು.
ಇದನ್ನೂ ಓದಿ:ಚೆನ್ನಪ್ಪನಪುರ ವೀರಭದ್ರೇಶ್ವರ ರಥೋತ್ಸವದಲ್ಲಿ ಚಕ್ರ ಮುರಿದು, ಉರುಳಿ ಬಿದ್ದ ರಥ
“ಅಶೋಕ್ ಜೀ ಮತ್ತು ನಾನು (ಮೋದಿ) ಮುಖ್ಯಮಂತ್ರಿಗಳಾಗಿ ಕೆಲಸ ಮಾಡಿದ್ದೇವೆ. ದೇಶದ ಎಲ್ಲಾ ಮುಖ್ಯಮಂತ್ರಿಗಳ ಸಾಲಿನಲ್ಲಿ ಗೆಹ್ಲೋಟ್ ಅತ್ಯಂತ ಹಿರಿಯರಾಗಿದ್ದಾರೆ. ಅಶೋಕ್ ಜೀ ಈಗಲೂ ದೇಶದ ಅತೀ ಹಿರಿಯ ಮುಖ್ಯಮಂತ್ರಿಗಳಾಗಿದ್ದು, ಅನುಭವಿ ರಾಜಕಾರಣಿಯಾಗಿದ್ದಾರೆ” ಎಂದು ಹೊಗಳಿದರು.
ನಂತರ ಪ್ರಧಾನಿ ಮೋದಿ ಅವರು ತಮ್ಮ ಭಾಷಣದಲ್ಲಿ, ಸ್ವಾತಂತ್ರ್ಯ ನಂತರ ಬರೆದ ಇತಿಹಾಸದಲ್ಲಿ ಬುಡಕಟ್ಟು ಸಮುದಾಯದ ಹೋರಾಟ ಮತ್ತು ತ್ಯಾಗಕ್ಕೆ ಸೂಕ್ತ ಸ್ಥಾನ ಮಾನ ದೊರಕಲಿಲ್ಲ ಎಂದು ಹೇಳಿದರು.
Related Articles
ಇಂದು ದೇಶದಲ್ಲಿ ದಶಕಗಳ ಹಿಂದೆ ನಡೆದ ತಪ್ಪುಗಳನ್ನು ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಬುಡಕಟ್ಟು ಜನಾಂಗವನ್ನು ಹೊರತುಪಡಿಸಿ ಭಾರತದ ಭೂತ, ವರ್ತಮಾನ ಮತ್ತು ಭವಿಷ್ಯಕಾಲ ಪೂರ್ಣಗೊಳ್ಳಲಾರದು ಎಂದು ಪ್ರಧಾನಿ ಮೋದಿ ತಿಳಿಸಿದ್ದು, ನಮ್ಮ ಸ್ವಾತಂತ್ರ್ಯ ಹೋರಾಟದ ಪ್ರತಿಯೊಂದು ಅಂಶವೂ ಇತಿಹಾಸದ ಪುಟಗಳಲ್ಲಿ ದಾಖಲಾಗಬೇಕಾಗಿದೆ ಎಂದರು.
PM Narendra Modi, Praises, Rajastan, CM Ashok Gehlot, Udayavani News, ಪ್ರಧಾನಿ ಮೋದಿ, ರಾಜಸ್ಥಾನ, ಅಶೋಕ್ ಗೆಹ್ಲೋಟ್