Advertisement

ಇಂದು ಸೈನ್ಯವನ್ನು ಬಲಪಡಿಸುವ, ಮೇಡ್ ಇನ್ ಇಂಡಿಯಾ ಸಾಧ್ಯವಾಗಿದೆ: ಪ್ರಧಾನಿ ಮೋದಿ

05:04 PM Feb 06, 2023 | Team Udayavani |

ತುಮಕೂರು : ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ತುಮಕೂರಿನ ಹೆಚ್ ಎಎಲ್ ಹೆಲಿಕಾಪ್ಟರ್ ಕಾರ್ಖಾನೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದರು.

Advertisement

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಸಂತರ ಆಶೀರ್ವಾದದಿಂದ ನೂರಾರು ಕೋಟಿ ರೂ. ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ, ಕರ್ನಾಟಕದ ಯುವಕರಿಗೆ ಉದ್ಯೋಗ, ಗ್ರಾಮಸ್ಥರಿಗೆ ಮತ್ತು ಮಹಿಳೆಯರಿಗೆ ಸೌಲಭ್ಯಗಳನ್ನು ಒದಗಿಸುವ, ದೇಶದ ಸೈನ್ಯವನ್ನು ಬಲಪಡಿಸುವ ಮತ್ತು ಮೇಡ್ ಇನ್ ಇಂಡಿಯಾ ಸಾಧ್ಯವಾಗಿದೆ ಎಂದರು.

ಇದು ತುಮಕೂರಿಗೆ ಬಹಳ ವಿಶೇಷವಾದ ದಿನವಾಗಿದೆ ಏಕೆಂದರೆ ಜಿಲ್ಲೆಗೆ ದೇಶದಲ್ಲೇ ದೊಡ್ಡ ಹೆಲಿಕಾಪ್ಟರ್ ಕಾರ್ಖಾನೆಯನ್ನು ಪಡೆದುಕೊಂಡಿದೆ ಮತ್ತು ಕೈಗಾರಿಕಾ ಪಟ್ಟಣಕ್ಕೆ ಅಡಿಪಾಯವನ್ನು ಹಾಕಲಾಗಿದೆ.ತುಮಕೂರು ಜಿಲ್ಲೆಯ ನೂರಾರು ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದರು.

ಕರ್ನಾಟಕವು ಸಂತರು ಮತ್ತು ಋಷಿಮುನಿಗಳ ನಾಡು. ಕರ್ನಾಟಕವು ಯಾವಾಗಲೂ ಆಧ್ಯಾತ್ಮಿಕತೆ, ಜ್ಞಾನ ಮತ್ತು ವಿಜ್ಞಾನದ ಸಂಪ್ರದಾಯವನ್ನು ಬಲಪಡಿಸಿದೆ.ಇದರಲ್ಲಿ ಸಿದ್ಧಗಂಗಾ ಮಠದ ಪಾತ್ರ ದೊಡ್ಡದು ಎಂದರು.

Advertisement

ಕರ್ನಾಟಕದ ಉತ್ಪಾದನಾ ಸಾಮರ್ಥ್ಯವನ್ನು ಜಗತ್ತು ಗುರುತಿಸುತ್ತಿದೆ ಮತ್ತು ಡಬಲ್ ಇಂಜಿನ್ ಸರ್ಕಾರವು ಹೂಡಿಕೆದಾರರಿಗೆ ರಾಜ್ಯವನ್ನು ಮೊದಲ ಆಯ್ಕೆಯಾಗುವಂತೆ ಮಾಡಿದೆ.ಇಂದು ಇಲ್ಲಿ ಹೆಲಿಕಾಪ್ಟರ್ ಕಾರ್ಖಾನೆಯ ಲೋಕಾರ್ಪಣೆಯ ಮೂಲಕ ಇದು ಸ್ಪಷ್ಟವಾಗಿದೆ ಎಂದರು.

ಕರ್ನಾಟಕ ಯುವ ಪ್ರತಿಭೆ, ಯುವ ಆವಿಷ್ಕಾರಗಳ ನಾಡು.ಡ್ರೋನ್‌ ತಯಾರಿಕೆಯಿಂದ ಹಿಡಿದು ತೇಜಸ್‌ ಯುದ್ಧ ವಿಮಾನಗಳ ತಯಾರಿಕೆಯವರೆಗೆ ಕರ್ನಾಟಕದ ಉತ್ಪಾದನಾ ಕ್ಷೇತ್ರದ ಬಲವನ್ನು ಜಗತ್ತೇ ನೋಡುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next