Advertisement

ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ: ಅಮೃತ್ ಮಹೋತ್ಸವಕ್ಕೆ ಪ್ರಧಾನಿ ಮೋದಿ ಚಾಲನೆ

02:40 PM Mar 12, 2021 | Team Udayavani |

ಅಲಹಾಬಾದ್: ಭಾರತದ ಸ್ವಾತಂತ್ರ್ಯೋತ್ಸವದ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ(ಮಾರ್ಚ್ 12) ಗುಜರಾತಿನ ಸಾಬರಮತಿ ಆಶ್ರಮದಲ್ಲಿ ಅಮೃತ್ ಮಹೋತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದ್ದು, 75ನೇ ವರ್ಷದ ಅಮೃತ್ ಮಹೋತ್ಸವ್ 2023ರ ಆಗಸ್ಟ್ 15ರವರೆಗೆ ಮುಂದುವರಿಯಲಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಲೈವ್ ಕಾರ್ಯಕ್ರಮ: ಟಿವಿ ನಿರೂಪಕನ ಮೇಲೆ ಕಳಚಿ ಬಿದ್ದ ಸ್ಟುಡಿಯೋ ಸೆಟ್; ವಿಡಿಯೋ ವೈರಲ್

ಇಂದು ಸ್ವಾತಂತ್ರ್ಯೋತ್ಸವದ ಅಮೃತ್ ಮಹೋತ್ಸವದ ಮೊದಲ ದಿನವಾಗಿದೆ. 2022ರ ಆಗಸ್ಟ್ 15ಕ್ಕೂ ಮೊದಲೇ 75 ವಾರಗಳ  ಮುನ್ನವೇ ಈ ಮಹೋತ್ಸವ ಆರಂಭಗೊಂಡಿದೆ. ಇದು 2023ರ ಆಗಸ್ಟ್ 15ರವರೆಗೂ ಮುಂದುವರೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್ ನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ಗೆ ಚಾಲನೆ ನೀಡಿ ಮಾತನಾಡಿದರು.

ಸ್ವಾತಂತ್ರ್ಯ ಹೋರಾಟ ಐದು (Ideas at 75, Achievements at 75, Actions and Resolves at 75) ಪಿಲ್ಲರ್ ಗಳ ಮೇಲೆ ನಿಂತಿದ್ದು, ಇದು ದೇಶವನ್ನು ಮುನ್ನಡೆಸಲು ಹೆಚ್ಚಿನ ಸ್ಫೂರ್ತಿ ನೀಡಲಿದೆ ಎಂದು ಪ್ರಧಾನಿ ಹೇಳಿದರು.

ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಅಪಾರ ಕೊಡುಗೆ ನೀಡಿರುವ ಮಹಾತ್ಮ ಗಾಂಧಿ ಹಾಗೂ ಇತರ ಸ್ವಾತಂತ್ರ್ಯ ಹೋರಾಟಗಾರರಿಗೆ ಪ್ರಧಾನಿ ಈ ಸಂದರ್ಭದಲ್ಲಿ ಗೌರವ ಸಲ್ಲಿಸಿದರು. ಭಾರತ ದೇಶ ಲೋಕ್ ಮಾನ್ಯ ತಿಲಕ್ ಅವರ ಪೂರ್ಣ್ ಸ್ವರಾಜ್, ಆಜಾದ್ ಹಿಂದ್ ಫೌಜಿಯ ದೆಹಲಿ ಚಲೋ, ಭಾರತ ಬಿಟ್ಟು ತೊಲಗಿ ಚಳವಳಿಯನ್ನು ಎಂದಿಗೂ ಮರೆಯುವುದಿಲ್ಲ. ಮಂಗಲ್ ಪಾಂಡ್ಯ, ತಾತ್ಯಾ ಟೋಪಿ, ರಾಣಿ ಲಕ್ಷ್ಮೀ ಬಾಯಿ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಪಂಡಿತ್ ನೆಹರು, ಸರ್ದಾರ್ ಪಟೇಲ್, ಅಂಬೇಡ್ಕರ್ ಹೀಗೆ ನೂರಾರು ಹೋರಾಟಗಾರರಿಂದ ನಾವು ಸ್ಫೂರ್ತಿ ಪಡೆಯಬೇಕಾಗಿದೆ ಎಂದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next